ಮೇಡಮ್ ಟುಸ್ಸಾಡ್ಸ್‌ ಲಂಡನ್ನಿನ ಅತಿದೊಡ್ಡ ಪ್ರೇಕ್ಷಣೀಯ ಸ್ಥಳವಾಗಿದ್ದು, ಇಲ್ಲಿ ಜಗತ್ತಿನ ಖ್ಯಾತನಾಮರ ಮೇಣದ ಪ್ರತಿಮೆಗಳು ನೋಡಲು ಸಿಗುತ್ತವೆ.

ನವದೆಹಲಿ(ಮೇ.11): ಟೀಂ ಇಂಡಿಯಾವು ಚಾಂಪಿಯನ್ಸ್ ಟ್ರೋಫಿಯಲ್ಲಿ ಕೇವಲ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಅವಲಂಬಿತವಾಗಿಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್‌'ನಲ್ಲಿ ತಮ್ಮ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಒಂದು ವೇಳೆ ತಂಡಕ್ಕೆ ಗಾಯಾಳುಗಳ ಸಮಸ್ಯೆ ಕಾಡದಿದ್ದರೆ, ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಉಳಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೇಡಮ್ ಟುಸ್ಸಾಡ್ಸ್‌ ಲಂಡನ್ನಿನ ಅತಿದೊಡ್ಡ ಪ್ರೇಕ್ಷಣೀಯ ಸ್ಥಳವಾಗಿದ್ದು, ಇಲ್ಲಿ ಜಗತ್ತಿನ ಖ್ಯಾತನಾಮರ ಮೇಣದ ಪ್ರತಿಮೆಗಳು ನೋಡಲು ಸಿಗುತ್ತವೆ. ಜಗತ್ತಿನಾದ್ಯಂತ ಮೇಡಮ್ ಟುಸ್ಸಾಡ್ಸ್‌ ಸಂಸ್ಥೆಯ ಸುಮಾರು 23 ಶಾಖೆಗಳಿದ್ದು, 23ನೇ ಶಾಖೆ ನವದೆಹಲಿಯ ಕಾನಟ್ ಪ್ಲೇಸ್'ನಲ್ಲಿ ತಲೆಯೆತ್ತಿದೆ.

ಇಲ್ಲಿ ಮಹಾತ್ಮ ಗಾಂಧಿ, ಬಾಲಿವುಡ್ ಬಾದ್‌'ಶಾ ಅಮಿತಾಭ್ ಬಚ್ಚನ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಜಾಕಿ ಚಾನ್ ಸೇರಿದಂತೆ ವಿಶ್ವದ ಖ್ಯಾತನಾಮರ ವಿವಿಧ ಭಂಗಿಯ ಮೇಣದ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.

ಹರ್ಯಾಣದ ಹರಿಕೇನ್ ಎಂದೇ ಗುರುತಿಸಲಾಗುವ, ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ (1983) ಗೆದ್ದುಕೊಟ್ಟ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಬೌಲಿಂಗ್ ಮಾಡುತ್ತಿರುವ ಭಂಗಿಯ ಮೇಣದ ಮೂರ್ತಿಯನ್ನು ಅನಾವರಣಗೊಳಿಸಲಾಗಿದ್ದು ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ.

ಮರ್ಲಿನ್ ಎಂಟರ್‌'ಟೈನ್‌'ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಕಪಿಲ್ ದೇವ್ ಅವರ ಮೇಣದ ಪ್ರತಿಮೆಯನ್ನು ನಿರ್ಮಿಸಿದೆ.