ಕೇವಲ 18 ತಿಂಗಳೊಳಗಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 6 ದ್ವಿಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ನವದೆಹಲಿ(ಡಿ.03): ಟೀಂ ಇಂಡಿಯಾ ಅಂತಿಮ ಟೆಸ್ಟ್'ನ ಮೊದಲ ಇನಿಂಗ್ಸ್'ನಲ್ಲಿ ಬೃಹತ್ ಮೊತ್ತ ಕಲೆಹಾಕಿದೆ. ಕೇವಲ 18 ತಿಂಗಳೊಳಗಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 6 ದ್ವಿಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಇಂದು ಕೊಹ್ಲಿ ನಿರ್ಮಿಸಿದ ದಾಖಲೆಗಳಿವು:
* 6 ದ್ವಿಶತಕ: ಟೆಸ್ಟ್'ನಲ್ಲಿ ಆರನೇ ದ್ವಿಶತಕ ಸಿಡಿಸುವ ಮೂಲಕ ಕೊಹ್ಲಿ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಹೆಸರಿನಲ್ಲಿರುವ(ತಲಾ 6 ದ್ವಿಶತಕ) ದಾಖಲೆಯನ್ನು ಸರಿಗಟ್ಟಿದರು.
* ನಾಯಕನಾಗಿ ಅತಿ ಹೆಚ್ಚು ದ್ವಿಶತಕ: ವೆಸ್ಟ್'ಇಂಡಿಸ್ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ(5 ದ್ವಿಶತಕ) ನಾಯಕನಾಗಿ ಅತಿಹೆಚ್ಚು ಶತಕ ಬಾರಿಸಿದ ಕ್ರಿಕೆಟಿಗನೆನಿಸಿದರು.
* 243 ಟೆಸ್ಟ್ ಕ್ರಿಕೆಟ್'ನಲ್ಲಿ ಟೀಂ ಇಂಡಿಯಾ ನಾಯಕನ ಗರಿಷ್ಟ ವೈಯುಕ್ತಿಕ ಮೊತ್ತವಿದು.
* ತವರಿನ ಮೈದಾನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಗರಿಷ್ಠ ವೈಯುಕ್ತಿಕ ರನ್(243) ಗಳಿಸಿದ ಶ್ರೇಯವೂ ಕೊಹ್ಲಿ ಪಾಲಾಯಿತು.
