ಟಿ20 ಪಂದ್ಯದ ಸೋಲಿನ ಬೆನ್ನಲ್ಲೇ ಕೊಹ್ಲಿಗೆ ಮತ್ತೊಂದು ಶಾಕ್!
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 3ನೇ ಟಿ20 ಪಂದ್ಯ ಟೀಂ ಇಂಡಿಯಾ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಸರಣಿ ಗೆಲುವಿನ ಕನಸಿನಲ್ಲಿದ್ದ ನಾಯಕ ವಿರಾಟ್ ಕೊಹ್ಲಿಗೆ ಹೀನಾಯ ಸೋಲು ಆಘಾತ ತಂದಿದೆ. ಇದರ ಬೆನ್ನಲ್ಲೇ ಐಸಿಸಿ ಕೊಹ್ಲಿಗೆ ಮತ್ತೊಂದು ಶಾಕ್ ನೀಡಿದೆ.
ಬೆಂಗಳೂರು(ಸೆ.23): ಸೌತ್ ಆಫ್ರಿಕಾ ವಿರುದ್ದದ 3ನೇ ಹಾಗೂ ಇಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿತ್ತು. ಈ ಮೂಲಕ ಹರಿಗಣಗಳ ವಿರುದ್ಧ ತವರಿನಲ್ಲಿ ಸರಣಿ ಗೆಲ್ಲೋ ಸುವರ್ಣ ಅವಕಾಶವನ್ನೂ ಕೊಹ್ಲಿ ಸೈನ್ಯ ಕೈಚೆಲ್ಲಿತು. ಈ ಸೋಲಿನ ನೋವಿನ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿಗೆ ಐಸಿಸಿ ಮತ್ತೊಂದು ಶಾಕ್ ನೀಡಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಭಾರತದ ಗೆಲುವಿಗೆ ಭಂಗ; ಸರಣಿ ಸಮಬಲ!
ಬೆಂಗಳೂರು ಟಿ20 ಪಂದ್ಯದಲ್ಲಿ ಕೊಹ್ಲಿ ಐಸಿಸಿ ನಿಯಮ 2.12 ಉಲ್ಲಂಘಿಸಿದ ಕಾರಣಕ್ಕೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. 5ನೇ ಓವರ್‌ನಲ್ಲಿ ಕೊಹ್ಲಿ, ರನ್ ಓಡುವಾಗ ಸೌತ್ ಆಫ್ರಿಕಾ ವೇಗಿ ಬ್ಯೂರನ್ ಹೆಂಡ್ರಿಕ್ಸ್‌ಗೆ ಉದ್ದೇಶ ಪೂರ್ವಕವಾಗಿ ಭುಜ ತಾಗಿಸಿದ್ದಾರೆ. ಈ ಮೂಲಕ ನಿಯಮ ಉಲ್ಲಂಘಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಳಪೆ ಬ್ಯಾಟಿಂಗ್; ಟೀಂ ಇಂಡಿಯಾ ವಿರುದ್ಧ ಆಕ್ರೋಶ!
ಪಂದ್ಯದ ಬಳಿಕ ಕೊಹ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆಟಗಾರರ ವರ್ತನೆ ಕುರಿತ ನೂತನ ಡಿಮೆರಿಟ್ ಪಾಯಿಂಟ್ 2017ರಲ್ಲಿ ಜಾರಿಗೆ ಬಂದಿದೆ. ಹೊಸ ನಿಯಮ ಜಾರಿಯಾದ ಮೇಲೆ ಇದೀಗ ಕೊಹ್ಲಿ ಒಟ್ಟು 3 ಡಿಮೆರಿಟ್ ಪಾಯಿಂಟ್ ಪಡೆದಿದ್ದಾರೆ. 2018, ಜನವರಿ 15 ರಂದು ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯ ಹಾಗೂ ಐಸಿಸಿ ವಿಶ್ವಕಪ್ 2019ರಲ್ಲಿ ಆಫ್ಘಾನಿಸ್ತಾನ ವಿರುದ್ಧ ಕೊಹ್ಲಿ ಡಿಮೆರಿಟ್ ಪಾಯಿಂಟ್ ಪಡೆದಿದ್ದಾರೆ.