ಇನ್ನು ಕೊಹ್ಲಿ ಭಾರತ ತಂಡದ ಜೆರ್ಸಿಯನ್ನು ಅಮಿರ್‌'ಗೆ ಉಡುಗೊರೆಯಾಗಿ ನೀಡಿದರೆ, ದಂಗಲ್ ಚಿತ್ರಕ್ಕೆ ಬಳಸಿದ್ದ ಕ್ಲಾಪರ್ ಬೋರ್ಡ್ ಅನ್ನು ಕೊಹ್ಲಿಗೆ ಅಮೀರ್ ನೀಡಿದರು.

ನವದೆಹಲಿ(ಅ.04): ಪ್ರೇಯಸಿ ಅನುಷ್ಕಾ ಶರ್ಮಾ ನನ್ನನ್ನು ಸದಾ ಕಾಯಿಸುತ್ತಾಳೆ ಎಂದು ವಿರಾಟ್ ಕೊಹ್ಲಿ, ಅಮೀರ್ ಖಾನ್ ಜತೆಗಿನ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದಾರೆ.

ದೀಪಾವಳಿಯಂದು ಪ್ರಸಾರಗೊಳ್ಳಲಿರುವ ವಿಶೇಷ ಸಂದರ್ಶನದ ಚಿತ್ರೀಕರಣ ಮಂಗಳವಾರ ನಡೆಯಿತು. ಈ ವೇಳೆ ಕೊಹ್ಲಿ, ಅನುಷ್ಕಾರಲ್ಲಿ ತಾವು ಇಷ್ಟ ಪಡುವ ವಿಚಾರಗಳ ಬಗ್ಗೆಯೂ ಮಾತನಾಡಿದರು. ಇದೇ ವೇಳೆ, ‘ಕೊಹ್ಲಿಗೆ ಕ್ರಿಕೆಟ್ ಹೇಳಿಕೊಟ್ಟಿದ್ದು ನಾನೇ’ ಎಂಬ ಬಾಬಾ ರಾಮ್ ರಹೀಂ ಅವರ ಹೇಳಿಕೆಗೆ ಕೊಹ್ಲಿ ಬಿದ್ದು ಬಿದ್ದು ನಕ್ಕರು ಎಂದು ಮೂಲಗಳು ತಿಳಿಸಿವೆ.

ಇನ್ನು ಕೊಹ್ಲಿ ಭಾರತ ತಂಡದ ಜೆರ್ಸಿಯನ್ನು ಅಮಿರ್‌'ಗೆ ಉಡುಗೊರೆಯಾಗಿ ನೀಡಿದರೆ, ದಂಗಲ್ ಚಿತ್ರಕ್ಕೆ ಬಳಸಿದ್ದ ಕ್ಲಾಪರ್ ಬೋರ್ಡ್ ಅನ್ನು ಕೊಹ್ಲಿಗೆ ಅಮೀರ್ ನೀಡಿದರು.