ಮೊಹಾಲಿ[ಮಾ.10]: ಭಾರತ ತಂಡದ ರನ್‌ ಮಷಿನ್‌ ವಿರಾಟ್‌ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪುವ ಹೊಸ್ತಿಲಲ್ಲಿದ್ದಾರೆ. 225 ಏಕದಿನ ಪಂದ್ಯಗಳಿಂದ 10816 ರನ್‌ ಗಳಿಸಿರುವ ಕೊಹ್ಲಿಗೆ 11000 ರನ್‌ ಕ್ಲಬ್‌ಗೆ ಸೇರ್ಪಡೆಗೊಳ್ಳಲು ಕೇವಲ 184 ರನ್‌ ಅವಶ್ಯಕತೆ ಇದೆ. 

ಸರಣಿ ಜಯಕ್ಕೆ ಮೊಹಾಲಿ ವೇದಿಕೆ? ಅವಕಾಶದ ನಿರೀಕ್ಷೆಯಲ್ಲಿ ರಾಹುಲ್‌

ಸರಣಿಯಲ್ಲಿ ಈಗಾಗಲೇ 3 ಪಂದ್ಯಗಳಿಂದ 2 ಶತಕ ಸಹಿತ 283 ರನ್‌ ಗಳಿಸಿರುವ ವಿರಾಟ್‌, ಇನ್ನೆರಡು ಪಂದ್ಯಗಳಲ್ಲೇ 11000 ರನ್‌ ಮೈಲಿಗಲ್ಲು ತಲುಪಿದರೆ ಅಚ್ಚರಿಯಿಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಂಡೀಸ್‌ ವಿರುದ್ಧ ಸರಣಿಯಲ್ಲಿ 10000 ರನ್‌ ಪೂರೈಸಿದ್ದ ವಿರಾಟ್‌, ಕೇವಲ 20 ಇನ್ನಿಂಗ್ಸ್‌ಗಳಲ್ಲಿ 800ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. 

ಕೊಹ್ಲಿ ಬಾಯ್ಸ್ ಸೇನಾ ಕ್ಯಾಪ್ ಧರಿಸಿದ್ದಕ್ಕೆ ಪಾಕಿಸ್ತಾನ ಆಕ್ರೋಶ !

2019ರಲ್ಲಿ ವಿರಾಟ್ ಈಗಾಗಲೇ 500 ರನ್‌ ದಾಟಿದ್ದಾರೆ ಎಂದರೆ ನಂಬಲು ಅಸಾಧ್ಯ. ಈಗಾಗಲೇ ಏಕದಿನದಲ್ಲಿ 41 ಶತಕ ಬಾರಿಸಿರುವ ಕೊಹ್ಲಿ, ಈ ವರ್ಷದ ಕೊನೆ ವೇಳೆಗೆ ಸಚಿನ್‌ ತೆಂಡುಲ್ಕರ್‌ರ 49 ಶತಕಗಳ ದಾಖಲೆ ಮುರಿಯಲಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.