ಕೊಹ್ಲಿ ಬಾಯ್ಸ್ ಸೇನಾ ಕ್ಯಾಪ್ ಧರಿಸಿದ್ದಕ್ಕೆ ಪಾಕಿಸ್ತಾನ ಆಕ್ರೋಶ !

ಕಾಲು ಕೆರೆದುಕೊಂಡು ಬರುವ ಸ್ವಭಾವವನ್ನು ಪಾಕಿಸ್ತಾನ ಇನ್ನೂ ಬಿಟ್ಟಿಲ್ಲ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥವಾಗಿ ಟೀಂ ಇಂಡಿಯಾ ಸೇನಾ ಕ್ಯಾಪ್ ಧರಿಸಿ ಪಂದ್ಯವಾಡಿತ್ತು. ಇದಕ್ಕೆ ಪಾಕಿಸ್ತಾನ ಕಿಡಿ ಕಾರಿದೆ.

Pakistan angry on Team India wearing Indian Army cap instead of uniform cap

ರಾಂಚಿ(ಮಾ.09): ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೇನಾ ಕ್ಯಾಪ್(ARMY CAP) ಧರಿಸಿ ಕಣಕ್ಕಿಳಿದಿತ್ತು. ಪುಲ್ವಾಮಾ ಸೇನೇ ಮೇಲೆ ದಾಳಿ ಹಾಗೂ  ನಂತರ ನಡೆದ ಭಯೋತ್ಪಾದಕ ವಿರುದ್ಧದ ದಾಳಿಯಲ್ಲಿ ಹುತಾತ್ಮರಾದ ನಮ್ಮ ಸೈನಿಕರಿಗೆ ಗೌರವ ಸೂಚಿಸುವ ಸಲುವಾಗಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿತ್ತು. ಆದರೆ ಇದಕ್ಕೆ ಪಾಕಿಸ್ತಾನ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ರಾಂಚಿ ಪಂದ್ಯವನ್ನು ಸೈನಿಕರಿಗೆ ಅರ್ಪಿಸಿದ ಟೀಂ ಇಂಡಿಯಾ

ರಾಂಚಿ ಪಂದ್ಯದಲ್ಲಿ ಸೇನಾ ಕ್ಯಾಪ್ ಧರಿಸಿದ್ದಲ್ಲದೇ, ಪಂದ್ಯದ ಸಂಭಾವನೆಯನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದೆ. ಇಷ್ಟೇ ಅಲ್ಲ ಸೇನೆಯ ಜೊತೆಗೆ ನಾವಿದ್ದೇವೆ ಅನ್ನೋ ಸಂದೇಶವನ್ನೂ ಟೀಂ ಇಂಡಿಯಾ ಸಾರಿತ್ತು. ಇದೀಗ ಇದಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಕಿಡಿ ಕಾರಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟಿಗರು ಸಮವಸ್ತ್ರದ ಕ್ಯಾಪ್ ಬದಲು ಸೇನಾ ಕ್ಯಾಪ್ ಧರಿಸಿ ಆಡಿದೆ. ಇದು ಎಲ್ಲರ ಗಮನಕ್ಕೂ ಬಂದಿದೆ. ಆದರೆ ಐಸಿಸಿಗೆ ಇನ್ನೂ ತಿಳಿದಿಲ್ಲವೇ? ಇಂತಹ ವಿಚಾರಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಹೇಳೇಬೇಕೆ ಎಂದು ಖುರೇಷಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: INDvsAUS:ಹುತಾತ್ಮ ಯೋಧರಿಗೆ ವೀಕ್ಷಕ ವಿವರಣೆಗಾರರ ಸಲಾಂ!

ಇನ್ನೂ ಒಂದು ಹೆಜ್ಜೆ ಮುಂದೇ ಹೋಗಿರುವ ಪಾಕಿಸ್ತಾನದ ಮಾಹಿತಿ ಸಚಿವ ಫಾವದ್ ಚೌಧರಿ, ಐಸಿಸಿ ಕ್ರಮ ಕೈಗೊಳ್ಳದಿದ್ದರೆ ಕಾಶ್ಮೀರದಲ್ಲಿ ಭಾರತ ನಡೆಸುತ್ತಿರುವ ದಾಳಿಗಳ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡ ಕಪ್ಪು ಪಟ್ಟಿ ಧರಿಸಿ ಆಡಲಿದೆ ಎಂದು ಎಚ್ಚರಿಸಿದ್ದಾರೆ. ಇಷ್ಟೇ ಅಲ್ಲ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಐಸಿಸಿಗೆ ಲಿಖಿತ ದೂರು ನೀಡಲು ಸೂಚಿಸಿದ್ದಾರೆ.

ಇದನ್ನೂ ಓದಿ: ರಾಂಚಿ ಪಂದ್ಯ ಸೋತರೂ ಭಾರತೀಯರ ಮನ ಗೆದ್ದ ಟೀಂ ಇಂಡಿಯಾ!

ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ಪದೇ ಪದೇ ಭಾರತವನ್ನು ಕೆಣಕುತ್ತಿದೆ. ಇತ್ತ ಪಾಕಿಸ್ತಾನ ಮಂಡಳಿ ಕೂಡ ಅಸಂಬದ್ಧ ಹೇಳಿಕೆ ನೀಡುತ್ತಿದೆ. ಸದ್ಯ ಬಿಸಿಸಿಐ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  ರಾಂಚಿ ಪಂದ್ಯ ಆರಂಭಕ್ಕೂ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಎಂ.ಎಸ್.ಧೋನಿ ಸೇನಾ ಕ್ಯಾಪ್ ನೀಡಿದ್ದರು. ಬಳಿಕ ನಾಯಕ ಕೊಹ್ಲಿ ಹುತಾತ್ಮ ಯೋಧರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಸೇನಾ ಕ್ಯಾಪ್ ಧರಿಸುತ್ತಿದ್ದೇವೆ ಎಂದಿದ್ದರು. ಬಳಿಕ ಬಿಸಿಸಿಐ ಅದೀಕೃತ ಟ್ವಿಟಕ್ ಖಾತೆಯಲ್ಲೂ ಹೇಳಿದೆ.

Latest Videos
Follow Us:
Download App:
  • android
  • ios