ಖಲಿಯನ್ನು ಭೇಟಿಯಾಗಿರುವ ಫೋಟೋವನ್ನು ವಿರಾಟ್ ಕೊಹ್ಲಿ ತಮ್ಮ ಟ್ವಿಟರ್‌ ಅಕೌಂಟ್'ನಲ್ಲಿ ಹಂಚಿಕೊಂಡಿದ್ದು, ‘ಗ್ರೇಟ್ ಖಲಿಯನ್ನು ಭೇಟಿಯಾಗಿದ್ದು ಅದ್ಭುತ ಅನುಭವ. ಎಂಥಾ ಅಸಾಧಾರಣ ಮನುಷ್ಯ ಈತ’ ಎಂದು ಬರೆದಿದ್ದಾರೆ.
ಕೊಲಂಬೊ(ಆ.08): ಡಬ್ಲ್ಯೂಡಬ್ಲ್ಯೂಇನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಗ್ರೇಟ್ ಖಲಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ವಿದೇಶಿ ಕುಸ್ತಿಪಟುಗಳ ಎದೆಯಲ್ಲಿ ನಡುಕು ಹುಟ್ಟಿಸಿದ್ದ ಆಜಾನುಬಾಹು, ಮಾಜಿ ಚಾಂಪಿಯನ್ ಖಲಿ ಕೊಲಂಬೊದ ಹೋಟೆಲ್'ನಲ್ಲಿ ವಿರಾಟ್ ಕೊಹ್ಲಿಯನ್ನು ಭೇಟಿಯಾಗಿದ್ದಾರೆ.
ಖಲಿಯನ್ನು ಭೇಟಿಯಾಗಿರುವ ಫೋಟೋವನ್ನು ವಿರಾಟ್ ಕೊಹ್ಲಿ ತಮ್ಮ ಟ್ವಿಟರ್ ಅಕೌಂಟ್'ನಲ್ಲಿ ಹಂಚಿಕೊಂಡಿದ್ದು, ‘ಗ್ರೇಟ್ ಖಲಿಯನ್ನು ಭೇಟಿಯಾಗಿದ್ದು ಅದ್ಭುತ ಅನುಭವ. ಎಂಥಾ ಅಸಾಧಾರಣ ಮನುಷ್ಯ ಈತ’ ಎಂದು ಬರೆದಿದ್ದಾರೆ. ಖಲಿ ಮುಂದೆ ಕೊಹ್ಲಿ ಬಹಳ ಸಣ್ಣದಾಗಿ ಕಾಣಿಸುತ್ತಿದ್ದು, ಕೊಹ್ಲಿಯ ಮುಖಭಾವದಲ್ಲಿ ಅದು ತಿಳಿಯುತ್ತಿದೆ.
ವೇಗಿ ಉಮೇಶ್ ಯಾದವ್ ಸಹ ಖಲಿಯೊಂದಿಗೆ ಫೋಟೋ ತೆಗಿಸಿಕೊಂಡು ಟ್ವಿಟರ್'ನಲ್ಲಿ ಹಾಕಿದ್ದಾರೆ. ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ ಸಹ ಅವರೊಂದಿಗೆ ಫೋಟೋ ತೆಗಿಸಿಕೊಂಡಿದ್ದಾರೆ. ಆ ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ.
