ನಾಟಿಂಗ್‌ಹ್ಯಾಮ್[ಆ.24]: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಗೆದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ ತಮಗೆ ಬಹುಮಾನವಾಗಿ ಬಂದ ಶಾಂಪೇನ್ ಬಾಟಲಿಯನ್ನು ಕೋಚ್ ರವಿಶಾಸ್ತ್ರಿಗೆ ನೀಡಿದ್ದಾರೆ. 

ಇದನ್ನು ಓದಿ: ಅಂತಿಮ 2 ಟೆಸ್ಟ್ ಪಂದ್ಯ ಭಾರತ ತಂಡ ಪ್ರಕಟ-18ರ ಪೋರನಿಗೆ ಅವಕಾಶ!

ತಮ್ಮ ಮೇಲೆ ನಂಬಿಕೆಯಿಟ್ಟಿದ್ದಕ್ಕೆ ಕೋಚ್‌ಗೆ ನಾಯಕ ನೀಡಿದ ಉಡುಗೊರೆ ಇದು ಎನ್ನಲಾಗಿದೆ. ಜತೆಗೆ ತಂಡದ ಸಂಭ್ರಮಾಚರಣೆಗೆಂದು ಡ್ರೆಸ್ಸಿಂಗ್ ಕೊಠಡಿಯಲ್ಲಿ ಕೆಲ ಬಿಯರ್ ಕ್ರೇಟ್‌ಗಳನ್ನು ತಂದಿಡಲಾಗಿತ್ತಂತೆ. ಆದರೆ ಆಟಗಾರರು, ಬಿಯರ್ ಸೇವಿಸಿ ಸಂಭ್ರಮಿಸಲು ನಿರಾಕರಿಸಿದ್ದು ಸರಣಿ ಗೆದ್ದ ಮೇಲಷ್ಟೇ ಸಂಭ್ರಮಿಸುತ್ತೇವೆ ಎಂದು ತಂಡದ ಆಡಳಿತಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ನಾಲ್ಕನೇ ಟೆಸ್ಟ್’ಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ

ಭಾರತ ತಂಡವು ಮೂರನೇ ಟೆಸ್ಟ್’ನಲ್ಲಿ ಇಂಗ್ಲೆಂಡ್ ವಿರುದ್ಧ ಇನ್ನೂರಕ್ಕೂ ಹೆಚ್ಚು ರನ್’ಗಳ ಅಂತರದಲ್ಲಿ ಜಯಭೇರಿ ಬಾರಿಸಿ ಟೂರ್ನಿಯಲ್ಲಿ ಕಮ್’ಬ್ಯಾಕ್ ಮಾಡಿದೆ. ಇದೀಗ ನಾಲ್ಕನೇ ಟೆಸ್ಟ್ ಪಂದ್ಯವು ಆಗಸ್ಟ್ 30ರಿಂದ ಆರಂಭವಾಗಲಿದೆ. ಈ ಪಂದ್ಯವನ್ನು ಟೀಂ ಇಂಡಿಯಾ ಗೆದ್ದರೆ ಸರಣಿ ಸಮಬಲ ಸಾಧಿಸಿದಂತಾಗುತ್ತದೆ.