ಲಂಡನ್[ಆ.23]: ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ 14 ಆಟಗಾರರನ್ನೊಳಗೊಂಡ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಪ್ರಕಟಿಸಿದ್ದು, ಆಲ್ರೌಂಡರ್ ಮೊಯಿನ್ ಅಲಿ ಹಾಗೂ ಅಗ್ರ ಕ್ರಮಾಂಕದ ಬ್ಯಾಟ್ಸ್’ಮನ್ ಜೇಮ್ಸ್ ವಿನ್ಸ್ ತಂಡ ಕೂಡಿಕೊಂಡಿದ್ದಾರೆ.
ಈಗಾಗಲೇ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿರುವ ಇಂಗ್ಲೆಂಡ್ ಕಳೆದ ಪಂದ್ಯದಲ್ಲಿ 200 ರನ್’ಗಳಿಗೂ ಹೆಚ್ಚಿನ ಅಂತರದಲ್ಲಿ ಸೋಲು ಕಂಡಿತ್ತು. ಹೀಗಾಗಿ ನಾಲ್ಕನೇ ಟೆಸ್ಟ್’ಗೆ ಆಲ್ರೌಂಡರ್ ಮೊಯಿನ್ ಅಲಿ ಹಾಗೂ ಜೇಮ್ಸ್ ವಿನ್ಸ್ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇದನ್ನು ಓದಿ: ಅಂತಿಮ 2 ಟೆಸ್ಟ್ ಪಂದ್ಯ ಭಾರತ ತಂಡ ಪ್ರಕಟ-18ರ ಪೋರನಿಗೆ ಅವಕಾಶ!

ಇತ್ತೀಚೆಗಷ್ಟೇ ಅಲಿ ಕೌಂಟಿ ಚಾಂಪಿಯನ್’ಶಿಪ್’ನಲ್ಲಿ ಭರ್ಜರಿ ದ್ವಿಶತಕ ಹಾಗೂ ಹಾಗೂ 8 ವಿಕೆಟ್ ಕಬಳಿಸಿ ವರ್ಸಸ್’ಸ್ಟೈರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ವಿನ್ಸ್ ಕೌಂಟಿ ಚಾಂಪಿಯನ್’ಶಿಪ್’ನಲ್ಲಿ 56.46ರ ಸರಾಸರಿಯಲ್ಲಿ 847 ರನ್ ಬಾರಿಸಿದ್ದಾರೆ. ಕಳೆದ ಟೆಸ್ಟ್’ನ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 161 ರನ್’ಗಳಿಗೆ ಆಲೌಟ್ ಆಗಿ ಸೋಲಿನತ್ತ ಮುಖ ಮಾಡಿದ್ದ ಇಂಗ್ಲೆಂಡ್ ಬ್ಯಾಟಿಂಗ್ ಬಲ ಹೆಚ್ಚಿಸಿಕೊಳ್ಳಲು ವಿನ್ಸ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಹೀಗಿದೆ ಇಂಗ್ಲೆಂಡ್ ತಂಡ:
ಜೋ ರೂಟ್[ನಾಯಕ], ಮೊಯಿನ್ ಅಲಿ, ಜಾನಿ ಬೈರಿಸ್ಟೋ, ಜೋಸ್ ಬಟ್ಲರ್, ಆಲಿಸ್ಟರ್ ಕುಕ್, ಕೇತನ್ ಜೆನ್ನಿಂಗ್ಸ್, ಓಲಿ ಪೋಪ್, ಜೇಮ್ಸ್ ವಿನ್ಸ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಜೇಮ್ಸ್ ಆ್ಯಂಡರ್’ಸನ್, ಸ್ಟುವರ್ಟ್ ಬ್ರಾಡ್, ಸ್ಯಾಮ್ ಕುರ್ರಾನ್.