ಸುದ್ದಿಗಾರರ ವಿರುದ್ಧ ಗರಂ ಆದ ಕೊಹ್ಲಿ: ಬೆಸ್ಟ್ 11 ತಂಡ ನೀವೇ ಹೇಳಿ ಎಂದ ವಿರಾಟ್

First Published 17, Jan 2018, 10:29 PM IST
Virat Kohli lashes out in Post Match Press Conference
Highlights

ಎರಡನೇ ಟೆಸ್ಟ್'ನಲ್ಲಿ ಧವನ್ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ಕೈಬಿಟ್ಟು ಕೆ.ಎಲ್ ರಾಹುಲ್ ಹಾಗೂ ಇಶಾಂತ್ ಶರ್ಮಾ ಅವರನ್ನು ಆಯ್ಕೆ ಮಾಡಿದ್ದು ಎರಡನೇ ಟೆಸ್ಟ್ ಆರಂಭದಿಂದಲೇ ಚರ್ಚೆಗೆ ಗ್ರಾಸವಾಗಿತ್ತು. ಸುದ್ದಿಗಾರರ ಪ್ರಶ್ನೆಗೆ ಕೊಹ್ಲಿ ಪ್ರತಿಕ್ರಿಯೆ ಹೇಗಿತ್ತು ಅಂತ ನೀವೇ ಒಮ್ಮೆ ನೋಡಿ...

ಸೆಂಚೂರಿಯನ್(ಜ.17): ದಕ್ಷಿಣ ಆಫ್ರಿಕಾ ನೀಡಿದ್ದ 287 ರನ್'ಗಳ ಗುರಿ ತಲುಪಲು ವಿಫಲವಾದ ಟೀಂ ಇಂಡಿಯಾ ಐದನೇ ದಿನದಾಟದ ಊಟದ ವಿರಾಮಕ್ಕೂ ಮುನ್ನ ಸರ್ವಪತನ ಕಂಡು ಸರಣಿ ಕೈಚೆಲ್ಲಿತು.

ಟೀಂ ಇಂಡಿಯಾದ ಬಹುತೇಕ ಆಟಗಾರರು ತಮ್ಮ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ತೋರುವಲ್ಲಿ ವಿಫಲವಾದರು. ಕೇಪ್'ಟೌನ್ ಟೆಸ್ಟ್'ನಲ್ಲಿ 72 ರನ್'ಗಳಿಂದ ಸೋತಿದ್ದ ಟೀಂ ಇಂಡಿಯಾ, ಎರಡನೇ ಟೆಸ್ಟ್'ನಲ್ಲಿ 135 ರನ್'ಗಳ ಅಂತರದ ಸೋಲು ಕಂಡಿದೆ. 2ನೇ ಟೆಸ್ಟ್ ಸೋಲಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗರಂ ಆಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ‘ನಾವು ಈ ಪಂದ್ಯ ಗೆದ್ದಿದ್ದರೆ ಇದೇ ಶ್ರೇಷ್ಠ ತಂಡ ಎಂದಾಗುತ್ತಿತ್ತು. ಫಲಿತಾಂಶಗಳನ್ನು ನೋಡಿಕೊಂಡು ನಾವು ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವುದಿಲ್ಲ. ಸೂಕ್ತವಾದ ತಂಡ ಯಾವುದು ಎಂದು ನೀವೇ ಹೇಳಿ, ಅದೇ ತಂಡವನ್ನು ಆಡಿಸುತ್ತೇವೆ’ ಎಂದು ಕೊಹ್ಲಿ ಖಾರವಾಗಿ ಉತ್ತರಿಸಿದರು.

loader