ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಆಸೀಸ್ ಎದುರಿನ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವೇ ಗೆಲ್ಲುವ ಫೇವರೇಟ್ ಎಂದು ಆಸೀಸ್ ಮಾಜಿ ಲೆಗ್ ಸ್ಪಿನ್ನರ್ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ(ಫೆ.23): ವೃತ್ತಿಜೀವನದ ಅದ್ಭುತ ಫಾರ್ಮ್'ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇಡೀ ಕ್ರಿಕೆಟ್ ಜಗತ್ತೇ ಕೊಂಡಾಡುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಮನಬಿಚ್ಚಿ ಕೊಂಡಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿರಾಟ್ ಕೊಹ್ಲಿ ಪ್ರಸ್ತುತ ವಿಶ್ವದ ನಂ.1 ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಅಲ್ಪಾವಧಿಯಲ್ಲೇ ಶತಕಗಳ ಮೇಲೆ ಶತಕಗಳನ್ನು ಸಿಡಿಸುತ್ತಾ ಸಾಗುತ್ತಿರುವ ಈತನ ಆಟದ ವೈಖರಿ ನನ್ನನ್ನು ದಿಗ್ಮೂಢನನ್ನಾಗಿಸುತ್ತಿದೆ. ವಿವ್ ರಿಚರ್ಡ್ಸ್, ಸಚಿನ್ ಹಾಗೂ ಲಾರಾ ಅವರುಗಳ ಸಂಮಿಶ್ರಣದಂತಿರುವ ಆತನ ಆಟವನ್ನು ನೋಡುವುದೇ ಚೆಂದ ಎಂದು ಸ್ಪಿನ್ ದಂತಕಥೆ ಶೇನ್ ವಾರ್ನ್ ಕೊಂಡಾಡಿದ್ದಾರೆ.

ಇದೇ ವೇಳೆ ಕೊಹ್ಲಿ ಆಕ್ರಮಣಕಾರಿ ನಾಯಕತ್ವವೂ ನನಗಿಷ್ಟ. ಹಾಗೆಯೇ ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಆಸೀಸ್ ಎದುರಿನ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವೇ ಗೆಲ್ಲುವ ಫೇವರೇಟ್ ಎಂದು ಆಸೀಸ್ ಮಾಜಿ ಲೆಗ್ ಸ್ಪಿನ್ನರ್ ಅಭಿಪ್ರಾಯಪಟ್ಟಿದ್ದಾರೆ.