ನವದೆಹಲಿ[ಮೇ.23]: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 2019ನೇ ಸಾಲಿನ ಅತ್ಯಂತ ವಿಶ್ವಾಸಾರ್ಹ ಕ್ರೀಡಾ ವ್ಯಕ್ತಿತ್ವ ಹೊಂದಿದ ಆಟಗಾರರಾಗಿ ಹೊರ ಹೊಮ್ಮಿದ್ದಾರೆ. 

ಕೊಹ್ಲಿ ಜತೆ ಸಚಿನ್ ತೆಂಡುಲ್ಕರ್ ಹಾಗೂ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ಎಂ. ಎಸ್.ಧೋನಿ ಹೆಸರಿಲ್ಲದಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಗ್ರಾಹಕರ ಒಳನೋಟಗಳ ಕಂಪನಿ (ಕನ್ಯೂಮರ್ಸ್‌ ಇನ್‌ಸೈಟ್) ಟಿಆರ್‌ಎ ನಡೆಸಿದ ಅಧ್ಯಯನದಲ್ಲಿ ಹಲವು ಕಂಪನಿಗಳ ರಾಯಭಾರಿ ಆಗಿರುವ ಹಾಗೂ ಈ ಒಪ್ಪಂದಗಳಿಂದ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ವಿರಾಟ್ ಕೊಹ್ಲಿ, ಅತ್ಯಂತ ವಿಶ್ವಾಸಾರ್ಹ ಕ್ರೀಡಾ ವ್ಯಕ್ತಿತ್ವ ಹೊಂದಿರುವ ಆಟಗಾರನಾಗಿ ಹೊರಹೊಮ್ಮಿದ್ದಾರೆ. 

ಭಾರತೀಯ ಸೇನೆಗಾಗಿ ವಿಶ್ವಕಪ್ ಗೆಲ್ಲಲು ಪ್ರಯತ್ನಿಸುತ್ತೇವೆ: ವಿರಾಟ್ ಕೊಹ್ಲಿ

ಕ್ರೀಡೆ, ಉದ್ಯಮ ಸೇರಿದಂತೆ ಇತರೆ ಕ್ಷೇತ್ರಗಳಿಂದ 39 ಮಂದಿಯನ್ನು 2019ನೇ ಸಾಲಿನ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿತ್ವ ಹೊಂದಿದವರನ್ನು ಆಯ್ಕೆ ಮಾಡಲಾಗಿದೆ. 16 ನಗರಗಳ 2315 ಗ್ರಾಹಕರ ಅಭಿಪ್ರಾಯದ ಮೇಲೆ ಈ ಅಧ್ಯಯನ ನಡೆಸಲಾಗಿದೆ.