ತ್ರಿಕೋನ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ವಿರಾಟ್, ನೆಟ್ಸ್ ಅಭ್ಯಾಸ ನಡೆಸುತ್ತಿದ್ದರು ಎಂದು ವರದಿಯಾಗಿತ್ತು. ಇದೀಗ ಕೊಹ್ಲಿ ಐಪಿಎಲ್'ಗಾಗಿ ಹೊಸ ಕೇಶವಿನ್ಯಾಸ ಸಹ ಮಾಡಿಕೊಂಡಿದ್ದಾರೆ.

ನವದೆಹಲಿ(ಮಾ.21): ಐಪಿಎಲ್ 11ನೇ ಆವೃತ್ತಿಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.

ತ್ರಿಕೋನ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ವಿರಾಟ್, ನೆಟ್ಸ್ ಅಭ್ಯಾಸ ನಡೆಸುತ್ತಿದ್ದರು ಎಂದು ವರದಿಯಾಗಿತ್ತು. ಇದೀಗ ಕೊಹ್ಲಿ ಐಪಿಎಲ್'ಗಾಗಿ ಹೊಸ ಕೇಶವಿನ್ಯಾಸ ಸಹ ಮಾಡಿಕೊಂಡಿದ್ದಾರೆ.

Scroll to load tweet…

ಮಂಗಳವಾರ ಕೊಹ್ಲಿಯ ತಮ್ಮ ಹೊಸ ಹೇರ್‌ಸ್ಟೈಲ್ ಫೋಟೋವನ್ನು ಟ್ವೀಟ್ ಮಾಡಿದ್ದು, ಫೋಟೋ ವೈರಲ್ ಆಗಿದೆ. ಏ. 7ರಿಂದ ಐಪಿಎಲ್ ಆರಂಭಗೊಳ್ಳಲಿದ್ದು, ಬೆಂಗಳೂರು ತಂಡ ಅಭ್ಯಾಸ ಶಿಬಿರ ಆರಂಭಿಸಿದೆ. ಸದ್ಯದಲ್ಲೇ ಬೆಂಗಳೂರಿಗೆ ಕೊಹ್ಲಿ ಆಗಮಿಸಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.