ಕೊಹ್ಲಿ ಹಾಗೂ ಸ್ಮಿತ್ ನಡುವಿನ ಮಾತಿನ ಚಕಮಕಿ ನನಗೆ ಹಿಡಿಸಿತು. ಈ ರೀತಿಯ ಪ್ರಸಂಗಗಳು ಆಟದ ರೋಚಕತೆಯನ್ನು ಹೆಚ್ಚಿಸುತ್ತವೆ ಎಂದು ಹಾಗ್ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ(ಮಾ.12): ಆಸೀಸ್ ನಾಯಕ ಸ್ಟೀವನ್ ಸ್ಮಿತ್ ಅವರ ಡಿಆರ್'ಎಸ್ ವಿವಾದಕ್ಕೆ ಪ್ರತಿಯಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯಾದ ಮಾಧ್ಯಮಗಳು ಹೀಗಳೆದಿದ್ದವು. ಆದರೆ ಇದೀಗ ಒಬ್ಬರಾದ ಮೇಲೆ ಒಬ್ಬರು ಆಸ್ಟ್ರೇಲಿಯಾದ ಮಾಜಿ ಆಟಗಾರರು ಕೊಹ್ಲಿಯ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ.
ಮಾಜಿ ಎಡಗೈ ಸ್ಪಿನ್ನರ್ ಬ್ರಾಡ್ ಹಾಗ್ ಭಾರತೀಯ ನಾಯಕನನ್ನು ಬೆಂಬಲಿಸಿದ್ದು, ಮೈದಾನದಲ್ಲಿ ಕೊಹ್ಲಿಯ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.
"ಕೊಹ್ಲಿ ಒಬ್ಬ ಭಾವನಾತ್ಮಕ ವ್ಯಕ್ತಿ, ತಮ್ಮ ಆಟದಿಂದಲೇ ಎಲ್ಲಾ ಟೀಕೆಗಳಿಗೂ ಅವರು ಉತ್ತರಿಸುತ್ತಾರೆ. ಅವರ ಆಟ ಯುವಕರಿಗೆ ಮಾದರಿಯಾಗಿದ್ದು, ಕ್ರಿಕೆಟ್'ನಲ್ಲಿ ಈ ರೀತಿಯ ವಿವಾದಗಳು ಸಾಮಾನ್ಯ" ಎಂದಿದ್ದಾರೆ.
ಕೊಹ್ಲಿ ಹಾಗೂ ಸ್ಮಿತ್ ನಡುವಿನ ಮಾತಿನ ಚಕಮಕಿ ನನಗೆ ಹಿಡಿಸಿತು. ಈ ರೀತಿಯ ಪ್ರಸಂಗಗಳು ಆಟದ ರೋಚಕತೆಯನ್ನು ಹೆಚ್ಚಿಸುತ್ತವೆ ಎಂದು ಹಾಗ್ ಅಭಿಪ್ರಾಯಪಟ್ಟಿದ್ದಾರೆ.