ಧೋನಿ ವೆಸ್ಟ್ ಇಂಡಿಸ್ ಎದುರಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡುವ ಮೂಲಕ 114 ಎಸೆತಗಳನ್ನು ಎದುರಿಸಿ 54 ರನ್'ಗಳನ್ನು ಬಾರಿಸಿದ್ದರು. ಈ ಬಳಿಕ ಧೋನಿ ನಿವೃತ್ತಿ ತೆಗೆದುಕೊಳ್ಳುವುದು ಒಳಿತು ಎಂಬ ಟೀಕೆಗಳ ಮಾಹಿ ವಿರುದ್ಧ ಕೇಳಿಬಂದಿದ್ದವು.

ಕಿಂಗ್ಸ್‌ಟನ್(ಜು.07): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿರುವ ಬೆನ್ನಲ್ಲೇ, ತಂಡದ ನಾಯಕ ವಿರಾಟ್ ಕೊಹ್ಲಿ, ಮಾಹಿ ಪರ ಬ್ಯಾಟ್ ಬೀಸಿದ್ದಾರೆ.

‘ಧೋನಿ ಬಾಲನ್ನು ಅದ್ಭುತವಾಗಿ ಸ್ಟ್ರೈಕ್ ಮಾಡುತ್ತಾರೆ. ಯಾವ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕು ಅಥವಾ ಹೇಗೆ ಇನ್ನಿಂಗ್ಸ್ ಕಟ್ಟಬೇಕು ಎಂಬುದನ್ನು ಅವರಿಗೆ ಹೇಳಿ ಕೊಡಬೇಕಾಗಿಲ್ಲ’ ಎಂದು ವಿರಾಟ್ ಹೇಳಿದ್ದಾರೆ.

‘ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾ ವಿರುದ್ಧ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ಯಾವುದೇ ಒಂದು ಇನ್ನಿಂಗ್ಸ್ ನೋಡಿ ಬ್ಯಾಟ್ಸ್‌'ಮನ್‌ಗಳ ಸಾಮರ್ಥ್ಯ ನಿರ್ಧರಿಸುವುದು ಸರಿಯಲ್ಲ. ಒಂದು ಹಂತದಲ್ಲಿ ಎಲ್ಲಾ ಬ್ಯಾಟ್ಸ್‌'ಮನ್‌'ಗಳಿಗೂ ಈ ಸಮಸ್ಯೆ ಎದುರಾಗುತ್ತದೆ’ ಎನ್ನುವ ಮೂಲಕ ಧೋನಿ ಬೆನ್ನಿಗೆ ನಿಂತಿದ್ದಾರೆ.