2019ರಲ್ಲಿ ಕೊಹ್ಲಿ ಪುಡಿ ಮಾಡಲಿದ್ದಾರೆ ತೆಂಡುಲ್ಕರ್ 5 ದಾಖಲೆಗಳು!
2018ನೇ ವರ್ಷ ಕೊಹ್ಲಿ ಪಾಲಿಗೆ ಸ್ಮರಣೀಯವಾಗಿತ್ತು. ಇದೀಗ 2019ನೇ ವರ್ಷವನ್ನೂ ಐತಿಹಾಸಿಕ ಗೆಲುವಿನೊಂದಿಗೆ ಆರಂಭಿಸಿದ್ದಾರೆ. ಇಷ್ಟೇ ಅಲ್ಲ ಈ ವರ್ಷ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪ್ರಮುಖ 5 ದಾಖಲೆಗಳನ್ನ ಪುಡಿ ಮಾಡಲು ರೆಡಿಯಾಗಿದೆ.
ಸಿಡ್ನಿ(ಜ.08): ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ದಾಖಲೆ ಬರೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ಹೊಸ ವರ್ಷದಲ್ಲಿ ಮತ್ತಷ್ಟು ದಾಖಲೆ ಬರೆಯಲು ಸಜ್ಜಾಗಿದ್ದಾರೆ. 2018ರಲ್ಲಿ ಹಲವು ರೆಕಾರ್ಡ್ ಮಾಡಿರುವ ಕೊಹ್ಲಿ 2019ರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 5 ದಾಖಲೆಗಳನ್ನ ಪುಡಿ ಮಾಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಜನವರಿ 8 ಮತ್ತು 9 ಭಾರತ್ ಬಂದ್: ಏನಿರುತ್ತೆ, ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ
ತವರಿನಾಚೆ ಗರಿಷ್ಠ ರನ್ ಸರದಾರ
ಭಾರತ ಬಿಟ್ಟು ಇತರ ದೇಶಗಳಲ್ಲಿ ಗರಿಷ್ಠ ರನ್ ಸಿಡಿಸಿದ ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಸಚಿನ್ ಒಟ್ಟು 5065 ರನ್ ಸಿಡಿಸಿದ್ದಾರೆ. ಇನ್ನು 2ನೇ ಸ್ಥಾನದಲ್ಲಿರುವ ಧೋನಿ 4236 ರನ್ ಸಿಡಿಸಿದ್ದಾರೆ. ಸದ್ಯ ವಿರಾಟ್ ಕೊಹ್ಲಿ 4208 ರನ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಪ್ರತಿ ಸರಣಿಯಲ್ಲಿ ಗರಿಷ್ಠ ರನ್ ಸಿಡಿಸುವ ಕೊಹ್ಲಿ ಸಚಿನ್ ಗರಿಷ್ಠ ರನ್ ದಾಖಲೆ ಬ್ರೇಕ್ ಮಾಡೋ ಎಲ್ಲಾ ಸಾಧ್ಯತೆಗಳಿವೆ.
ಇದನ್ನೂ ಓದಿ: ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಗೆ ಪ್ರಧಾನಿ ಮೋದಿ ಅಭಿನಂದನೆ!
ಗರಿಷ್ಠ ಗೆಲುವಿನ ಶತಕ ದಾಖಲೆ
ಏಕದಿನದಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ. ಸಚಿನ್ ಏಕದಿನದಲ್ಲಿ 49 ಶತಕ ಸಿಡಿಸಿದ್ದಾರೆ. ಇದರಲ್ಲಿ 34 ಬಾರಿ ಟೀಂ ಇಂಡಿಯಾ ಗೆಲವು ಸಾಧಿಸಿದೆ. ಸಚಿನ್ ಗೆಲುವಿನ ಶತಕದ ದಾಖಲೆ ಮುರಿಯಲು ಕೊಹ್ಲಿ ಸಜ್ಜಾಗಿದ್ದಾರೆ. ಕೊಹ್ಲಿ ಸದ್ಯ 31 ಗೆಲುವಿನ ಶತಕ ಸಿಡಿಸಿದ್ದಾರೆ. ಹೀಗಾಗಿ 2019ರಲ್ಲಿ ಕೊಹ್ಲಿ ಈ ದಾಖಲೆಯನ್ನೂ ಮುರಿಯಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಗರಿಷ್ಠ ಶತಕ(ಏಕದಿನ)
ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಗರಿಷ್ಠ ಏಕದಿನ ಶತಕ ಸಿಡಿಸಿದ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಭಾರತದಲ್ಲಿ ಸಚಿನ್ 4 ಏಕದಿನ ಶತಕ ಸಿಡಿಸಿದ್ದಾರೆ. ಇದೀಗ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ಏಕದಿನ ಸರಣಿಗಾಗಿ ಭಾರತಕ್ಕೆ ಆಗಮಿಸಲಿದೆ. ಈಗಾಗಲೇ 3 ಶತಕ ಸಿಡಿಸಿರುವ ಕೊಹ್ಲಿ ಸಚಿನ್ ದಾಖಲೆ ಮುರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: 1.10 ಲಕ್ಷ ಸಾಮರ್ಥ್ಯ,700 ಕೋಟಿ ವೆಚ್ಚ- ತಲೆ ಎತ್ತಲಿದೆ ವಿಶ್ವದ ಬೃಹತ್ ಕ್ರೀಡಾಂಗಣ
ಚೇಸಿಂಗ್‌ನಲ್ಲಿ ಗರಿಷ್ಠ ಶತಕ
ವಿರಾಟ್ ಕೊಹ್ಲಿ ಚೇಸ್ ಮಾಸ್ಟರ್ ಎಂದೇ ಗುರುತಿಸಿಕೊಂಡಿದ್ದಾರೆ. ಚೇಸಿಂಗ್‌ನಲ್ಲಿ ಸಚಿನ್ ತೆಂಡುಲ್ಕರ್ ಕೂಡ ಹೆಚ್ಚು ಯಶಸ್ಸು ಸಾಧಿಸಿದ್ದಾರೆ. ಚೇಸಿಂಗ್ ವೇಳೆ ಸಚಿನ್ ತೆಂಡೂಲ್ಕರ್ 39 ಶತಕ ಸಿಡಿಸಿದ್ದರೆ, ವಿರಾಟ್ ಕೊಹ್ಲಿ 38 ಸೆಂಚುರಿ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ 2019ರಲ್ಲಿ ಸಚಿನ್ ಚೇಸಿಂಗ್ ಸೆಂಚುರಿ ದಾಖಲೆ ಕೂಡ ಪುಡಿಯಾಗಲಿದೆ.
ಇದನ್ನೂ ಓದಿ: ಮಗಳ ಹೆಸರು ಬಹಿರಂಗ ಪಡಿಸಿದ ರೋಹಿತ್ ಶರ್ಮಾ!
ಅತೀ ವೇಗದಲ್ಲಿ 20,000 ಅಂತಾರಾಷ್ಟ್ರೀಯ ರನ್
ವಿರಾಟ್ ಕೊಹ್ಲಿ ಇತ್ತೀಚೆಗೆ ಅತೀ ವೇಗದಲ್ಲಿ 19000 ರನ್ ಸಿಡಿಸಿದ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ. ಸಚಿನ್ 432 ಇನ್ನಿಂಗ್ಸ್‌ಗಳಲ್ಲಿ 19000 ರನ್ ಸಿಡಿಸಿದ್ದರೆ, ಕೊಹ್ಲಿ 399 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ಇದೀಗ 20,000 ರನ್ ಮೇಲೆ ಕಣ್ಣಿಟ್ಟಿದ್ದಾರೆ. ಸಚಿನ್ ತೆಂಡುಲ್ಕರ್ 453 ಇನ್ನಿಂಗ್ಸ್‌ಗಳಲ್ಲಿ 20 ಸಾವಿರ ರನ್ ಸಿಡಿಸಿದ್ದಾರೆ. ಪ್ರತಿ ವರ್ಷ ಸಾವಿರಕ್ಕಿಂತ ಹೆಚ್ಚು ರನ್ ಸಿಡಿಸುವ ಕೊಹ್ಲಿ 2019ರಲ್ಲೇ 20 ಸಾವಿರ ರನ್ ದಾಖಲೆ ಬರೆಯಲಿದ್ದಾರೆ.