ಅಹಮ್ಮದಾಬಾದ್(ಜ.06): ವಿಶ್ವದ ಅತೀ ದೊಡ್ಡ ಕ್ರೀಡಾಂಗಣ ಇದೀಗ ಭಾರತದಲ್ಲಿ ನಿರ್ಮಾಣವಾಗುತ್ತಿದೆ. ಸದ್ಯ ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಮೈದಾನ ಅತೀ ದೊಡ್ಡ ಕ್ರಿಕೆಟ್ ಮೈದಾನ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಈ ದಾಖಲೆಯನ್ನ ಭಾರತ ಮುರಿಯಲಿದೆ. ಇತರ ಎಲ್ಲಾ ಕ್ರಿಕೆಟ್ ಮೈದಾನಕ್ಕಿಂತ ದೊಡ್ಡ ಮೈದಾನ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ.

ಇದನ್ನೂ ಓದಿ: ವಿಶ್ವಕಪ್ ಹೀರೋ ಕಪಿಲ್ ದೇವ್‌ಗೆ 60ನೇ ವರ್ಷದ ಹುಟ್ಟುಹಬ್ಬ ಸಂಭ್ರಮ

ಗುಜರಾತ್‌ನ ಮೊಟೆರಾದ ಮೈದಾನ ಹೊಸ ರೂಪ ತಾಳುತ್ತಿದೆ. ಗುಜರಾತ್ ಕ್ರಿಕೆಟ್ ಸಂಸ್ಥೆ ಇದೀಗ ಐತಿಹಾಸಿಕ ಕ್ರೀಡಾಂಗಣ ನಿರ್ಮಿಸುತ್ತಿದೆ. ಮೊಟೆರಾ ಕ್ರೀಡಾಂಗಣವನ್ನ ಮೇಲ್ದರ್ಜೆಗೆ ಏರಿಸಲಾಗುತ್ತಿದೆ.  2017ರಿಂದ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಗುಜರಾತ್ ಕ್ರಿಕೆಟ್ ಸಂಸ್ಥೆ ಉಪಾಧ್ಯಕ್ಷ ಪರಿಮಾಲ್ ನಥ್ವಾನಿ ಇತ್ತೀಚೆಗೆ ಕ್ರೀಡಾಂಗಣ ನಿರ್ಮಾಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿದ್ದಾರೆ.

 

 

ಇದನ್ನೂ ಓದಿ: ಏಕದಿನದಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಐವರು ಕ್ರಿಕೆಟಿಗರು!

ನೂತನ ಕ್ರೀಡಾಂಗಣದ ನಿರ್ಮಾಣ ವೆಚ್ಚ ಒಟ್ಟು 700 ಕೋಟಿ ರೂಪಾಯಿ. ವಿಶೇಷ ಅಂದರೆ 1.10 ಲಕ್ಷ ಅಭಿಮಾನಿಗಳು ಕುಳಿತ ಪಂದ್ಯವನ್ನ ವೀಕ್ಷಿಸಬಹುದು. ಈ ಕ್ರೀಡಾಂಗಣ ಒಟ್ಟು 63 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಇದು ದೇಶದ ಹೆಮ್ಮೆಯ ಕ್ರೀಡಾಂಗಣವಾಗಲಿದೆ ಎಂದು ಪರಿಮಾಲ್ ಹೇಳಿದ್ದಾರೆ.

ಗುಜಾರಾತ್‌ನಲ್ಲಿ ಈಗಾಗಲೇ ವಿಶ್ವದ ಅತೀ ದೊಡ್ಡ ಪ್ರತಿಮೆ ನಿರ್ಮಿಸಿ ದಾಖಲೆ ಬರೆಯಲಾಗಿದೆ. ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುವ, ದೇಶದ ಏಕತೆಗೆ ಶ್ರಮಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆ ನಿರ್ಮಿಸಿಲಾಗಿದೆ. ಈ ಮೂಲಕ ಇತರ ಪ್ರತಿಮೆಗಳ ದಾಖಲೆ ಬ್ರೇಕ್ ಮಾಡಲಾಗಿದೆ. ಇದೀಗ ಕ್ರೀಡಾಂಗಣದಲ್ಲೂ ಗುಜಾರಾತ್ ದಾಖಲೆ ಬರೆಯಲಿದೆ.