ಎಬಿಡಿಗೆ ಭಾವನಾತ್ಮಕ ವಿದಾಯ ಕೋರಿದ ಕೊಹ್ಲಿ

Virat Kohli bids emotional farewell to AB de Villiers
Highlights

ಸಾಮಾಜಿಕ ಜಾಲತಾಣದಲ್ಲಿ ಎಬಿಡಿಗೆ ಶುಭಕೋರಿರುವ ಕೊಹ್ಲಿ, 'ನೀವು ಮಾಡಿದ್ದೆಲ್ಲಾ ಒಳಿತಾಗಲಿ ಸಹೋದರ ಎಂದು ಹಾರೈಸಿದ್ದಾರೆ. ಇನ್ನು ಮುಂದುವರೆದು, ನೀವು ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಬ್ಯಾಟಿಂಗ್ ಶೈಲಿಯನ್ನೇ ಬದಲಿಸಿಬಿಟ್ಟಿದ್ದೀರಾ. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಶುಭ ಹಾರೈಕೆಗಳು. ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ' ಎಂದು ಶುಭ ಹಾರೈಸಿದ್ದಾರೆ.

ಬೆಂಗಳೂರು[ಮೇ.26]: ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಎಬಿ ಡಿವಿಲಿಯರ್ಸ್’ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾವನಾತ್ಮಕ ವಿದಾಯದ ಸಂದೇಶ ರವಾನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಎಬಿಡಿಗೆ ಶುಭಕೋರಿರುವ ಕೊಹ್ಲಿ, 'ನೀವು ಮಾಡಿದ್ದೆಲ್ಲಾ ಒಳಿತಾಗಲಿ ಸಹೋದರ ಎಂದು ಹಾರೈಸಿದ್ದಾರೆ. ಇನ್ನು ಮುಂದುವರೆದು, ನೀವು ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಬ್ಯಾಟಿಂಗ್ ಶೈಲಿಯನ್ನೇ ಬದಲಿಸಿಬಿಟ್ಟಿದ್ದೀರಾ. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಶುಭ ಹಾರೈಕೆಗಳು. ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ' ಎಂದು ಶುಭ ಹಾರೈಸಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಉತ್ತಮ ಸ್ನೇಹಿತರಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವಾಗ ಈ ಜೋಡಿ ಹಲವಾರ ಸ್ಮರಣೀಯ ಇನಿಂಗ್ಸ್ ಕಟ್ಟಿದ್ದಾರೆ. ಇತ್ತೀಚೆಗಷ್ಟೇ ಡೆಲ್ಲಿ ಡೇರ್’ಡೆವಿಲ್ಸ್ ವಿರುದ್ಧ ಗೆಲುವಿನಲ್ಲಿ ಕೊಹ್ಲಿ-ಎಬಿಡಿ ಜೋಡಿ ಪ್ರಮುಖ ಪಾತ್ರವಹಿಸಿತ್ತು. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ್ದ ಕೊಹ್ಲಿ, ಯಾವಾಗಲೂ ಎಬಿಡಿ ಜತೆ ಇನಿಂಗ್ಸ್ ಕಟ್ಟುವುದಕ್ಕೆ ನಾನು ಇಷ್ಟಪಡುತ್ತೇನೆ. ಎಬಿಡಿ ಜತೆಗಿದ್ದಾಗ ಮತ್ತೊಂದು ತುದಿಯಲ್ಲಿ ಇನಿಂಗ್ಸ್ ಕಟ್ಟುವುದು ಸುಲಭ ಎಂದಿದ್ದರು. ಇನ್ನು ಸನ್’ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಎಬಿಡಿ ಹಿಡಿದ ಅದ್ಭುತ ಕ್ಯಾಚ್’ನ್ನು ಸ್ಪೈಡರ್ ಮ್ಯಾನ್’ಗೆ ಹೋಲಿಸಿದ್ದರು.

ಕಳೆದೆರಡು ದಿನಗಳ ಹಿಂದಷ್ಟೇ ಎಬಿ ಡಿವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಟ್ವಿಟರ್ ಮೂಲಕ ವಿದಾಯ ಘೋಷಿಸಿದ್ದರು. 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿರುವ ನಾನು, ಬೇರೆಯವರಿಗೆ ಅವಕಾಶ ಕಲ್ಪಿಸಲು ಸರಿಯಾದ ಸಮಯ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ದಣಿದಿದ್ದೇನೆ ಎಂದು ಹೇಳಿದ್ದರು. 

loader