ಎಬಿಡಿ ಸೂಪರ್’ಮ್ಯಾನ್ ಮಾತ್ರ ಅಲ್ಲ, ಸ್ಪೈಡರ್ ಮ್ಯಾನ್..!

Virat Kohli Compares AB de Villiers To A Marvel Superhero After Miracle Catch
Highlights

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಸನ್’ರೈಸರ್ಸ್ ಹೈದರಾಬಾದ್ ವಿರುದ್ಧ ಅಲೆಕ್ಸ್ ಹೇಲ್ಸ್ ಬಾರಿಸಿದ ಚೆಂಡನ್ನು ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಸೂಪರ್’ಮ್ಯಾನ್ ಜತೆಗೆ ತಾವೊಬ್ಬ ಸ್ಪೈಡರ್’ಮ್ಯಾನ್ ಎನ್ನುವುದನ್ನೂ ಸಾಬೀತು ಮಾಡಿದ್ದಾರೆ.

ಬೆಂಗಳೂರು[ಮೇ.18]: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಸನ್’ರೈಸರ್ಸ್ ಹೈದರಾಬಾದ್ ವಿರುದ್ಧ ಅಲೆಕ್ಸ್ ಹೇಲ್ಸ್ ಬಾರಿಸಿದ ಚೆಂಡನ್ನು ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಸೂಪರ್’ಮ್ಯಾನ್ ಜತೆಗೆ ತಾವೊಬ್ಬ ಸ್ಪೈಡರ್’ಮ್ಯಾನ್ ಎನ್ನುವುದನ್ನೂ ಸಾಬೀತು ಮಾಡಿದ್ದಾರೆ.

ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿದಿದ್ದ ಆರ್’ಸಿಬಿ ಮೊದಲು ಬ್ಯಾಟಿಂಗ್ ಮಾಡಿ 218 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಸನ್’ರೈಸರ್ಸ್ ಹೈದರಾಬಾದ್ ಉತ್ತಮ ಆರಂಭವನ್ನೇ ಪಡೆದಿತ್ತು. ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಅಲೆಕ್ಸ್ ಹೇಲ್ಸ್ 24 ಎಸೆತಗಳಲ್ಲಿ 37 ರನ್ ಸಿಡಿಸಿದ್ದರು. ಮೋಯಿನ್ ಅಲಿ ಎಸೆತದಲ್ಲಿ ಹೇಲ್ಸ್ ಬಾರಿಸಿದ ಚೆಂಡು ಬಹುತೇಕ ಸಿಕ್ಸರ್ ಗೆರೆ ದಾಟಿತು ಎಂದೇ ಭಾವಿಸಲಾಗಿತ್ತು. ಆದರೆ ಬೌಂಡರಿ ಲೈನ್’ನಲ್ಲಿದ್ದ ಎಬಿ ಡಿವಿಲಿಯರ್ಸ್ ಸ್ಪೈಡರ್’ಮ್ಯಾನ್ ರೀತಿ ಹಾರಿ ಅದ್ಭುತ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು.

ಎಬಿಡಿ ಕ್ಯಾಚ್ ಕೊಂಡಾಡಿರುವ ನಾಯಕ ವಿರಾಟ್ ಕೊಹ್ಲಿ ನಾನಿಂದು ಲೈವ್ ಆಗಿ ಸ್ಪೈಡರ್’ಮ್ಯಾನ್ ನೋಡಿದೆ ಎಂದು ಉದ್ಘರಿಸಿದ್ದಾರೆ.

ಹೀಗಿತ್ತು ಆ ಕ್ಯಾಚ್ :    

loader