ಆರ್’ಸಿಬಿ ಪಡೆಯ ನೀರಸ ಪ್ರದರ್ಶನಕ್ಕೆ ಕರ್ನಾಟಕದ ಕ್ರಿಕೆಟಿಗರನ್ನು ಕಡೆಗಣಿಸಿದ್ದು ಪ್ರಮುಖ ಕಾರಣ. ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ಕರುಣ್ ನಾಯರ್, ಉತ್ತಪ್ಪ ಮುಂತಾದ ಕನ್ನಡಿಗ ಬೇರೆ-ಬೇರೆ ತಂಡಗಳಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಇನ್ನು ಸರ್ಫರಾಜ್ ಖಾನ್’ರನ್ನು ರೀಟೈನ್ ಮಾಡಿಕೊಂಡಿದ್ದೇಕೆ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ. 

ಬೆಂಗಳೂರು[ಮೇ.22]: 11ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪ್ಲೇ-ಆಫ್‌ಗೇರದಿರಲು ಕಳಪೆ ಬೌಲಿಂಗ್ ಮಾತ್ರವಲ್ಲ, ಬ್ಯಾಟಿಂಗ್ ವೈಫಲ್ಯವೂ ಪ್ರಮುಖ ಕಾರಣ. ತಂಡದ ಬ್ಯಾಟಿಂಗ್ ಆಧಾರಸ್ತಂಭಗಳಾದ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್‌ ಹೊರತುಪಡಿಸಿ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. 

ನಾಯಕ ವಿರಾಟ್ ಕೊಹ್ಲಿ (530) ಹಾಗೂ ಎಬಿಡಿ (480) ಇಬ್ಬರೇ ಒಟ್ಟು 1010 ರನ್ ಕಲೆಹಾಕಿದರೆ ಬ್ರೆಂಡನ್ ಮೆಕ್ಕಲಂ, ಕ್ವಿಂಟನ್ ಡಿ ಕಾಕ್, ಮೊಯಿನ್ ಅಲಿ, ಪಾರ್ಥೀವ್ ಪಟೇಲ್, ಮನನ್ ವೋಹ್ರಾ, ಮನ್‌ದೀಪ್ ಸಿಂಗ್, ಕಾಲಿನ್ ಡಿ ಗ್ರಾಂಡ್ ಹೋಮ್, ಕೋರಿ ಆ್ಯಂಡರ್‌ಸನ್‌ರಂತಹ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ಗಳೆಲ್ಲರೂ ಸೇರಿ ಒಟ್ಟು ಗಳಿಸಿದ್ದು 1230 ರನ್ ಮಾತ್ರ. 