ಲಂಕಾಗೆ ಬನ್ನಿ ಆದರೆ ಕ್ರಿಕೆಟ್ ಆಡಲು ಅಲ್ಲ..! ಹೀಗೆ ಕೊಹ್ಲಿಗೆ ಆಹ್ವಾನ ನೀಡಿದ್ದು ಯಾರು ಗೊತ್ತಾ..?

First Published 17, Mar 2018, 4:11 PM IST
Virat Kohli and wife Anushka Sharma get invite from Sri Lanka sports minister to visit country for holiday
Highlights

ನಾನು ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದು, ಕಳೆದ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ ನಾನು ಕೊಲಂಬೊ ಟೆಸ್ಟ್ ಪಂದ್ಯವನ್ನು ಮೈದಾನಕ್ಕೆ ಹೋಗಿ ಕೊಹ್ಲಿ ಬ್ಯಾಟಿಂಗ್ ಕಣ್ತುಂಬಿಕೊಂಡಿದ್ದೇನೆಂದು ಹೇಳಿದ್ದಾರೆ.

ಕೊಲಂಬೊ(ಮಾ.17): ತ್ರಿಕೋನ ಟಿ೨೦ ಸರಣಿಯಿಂದ ವಿಶ್ರಾಂತಿ ಪಡೆದು, ಪತ್ನಿ ಅನುಷ್ಕಾ ಶರ್ಮಾ ಜತೆ ಸಮಯ ಕಳೆಯುತ್ತಿರುವ ವಿರಾಟ್ ಕೊಹ್ಲಿಗೆ ಶ್ರೀಲಂಕಾ ಕ್ರೀಡಾ ಸಚಿವ ದಯಸಿರಿ ಜಯಶೇಖರ, ಲಂಕಾಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ.

‘ಕೊಹ್ಲಿಯನ್ನು ನಾನು ಇಲ್ಲಿ ಕ್ರಿಕೆಟ್ ಆಡುವಂತೆ ಕೇಳುತ್ತಿಲ್ಲ. ಬದಲಾಗಿ ಪತ್ನಿ ಜತೆ ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ,ಆನಂದಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ. ನಾನು ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದು, ಕಳೆದ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ ನಾನು ಕೊಲಂಬೊ ಟೆಸ್ಟ್ ಪಂದ್ಯವನ್ನು ಮೈದಾನಕ್ಕೆ ಹೋಗಿ ಕೊಹ್ಲಿ ಬ್ಯಾಟಿಂಗ್ ಕಣ್ತುಂಬಿಕೊಂಡಿದ್ದೇನೆಂದು ಹೇಳಿದ್ದಾರೆ.

ಭಾರತ ತಂಡವು ಲಂಕಾ ಪ್ರವಾಸದಲ್ಲಿದ್ದು, ನಿದಾಸ್ ತ್ರಿಕೋನ ಟಿ20 ಸರಣಿಯಲ್ಲಿ ಫೈನಲ್ ಪ್ರವೇಶಿಸಿದ್ದು, ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

loader