ಮೆಲ್ಬರ್ನ್(ಜ.19): ಆಸ್ಟ್ರೇಲಿಯಾ ವಿರುದ್ಧದ ಸರಣಿ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ಟೆನಿಸ್‌ನತ್ತ ಚಿತ್ತ ಹರಿಸಿದ್ದಾರೆ. ನ್ಯೂಜಿಲೆಂಡ್ ಸರಣಿಗೂ ಮುನ್ನ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಭೇಟಿಯಾಗಿದ್ದಾರೆ.

ಇದನ್ನೂ ಓದಿ: ಟ್ವಿಟರ್ ಸ್ಪೆಷಲ್: ಇದು ಧೋನಿ ಅಭಿಮಾನಿಗಳಿಗಾಗಿ ಮಾತ್ರ...!

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಮೆಂಟ್ ವೀಕ್ಷಿಸಲು ತೆರಳಿದ ವಿರುಷ್ಕಾ ಜೋಡಿ, ರೋಜರ್ ಫೆಡರರ್ ಭೇಟಿಯಾಗಿದ್ದಾರೆ. ನೋವಾಜ್ ಜೊಕೊವಿಚ್ ಪಂದ್ಯ ವೀಕ್ಷಿಸಿದ ಕೊಹ್ಲಿ ಹಾಗೂ ಅನುಷ್ಕಾ, ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

 

ಇದನ್ನೂ ಓದಿ: ’ಸಚಿನ್ ಸಿಟ್ಟು ಕಂಡಿದ್ದೇನೆ, ಆದರೆ ಧೋನಿಯದ್ದಲ್ಲ’

ಟೆಸ್ಟ್ ಸರಣಿಯಲ್ಲಿ 2-1 ಅಂತರದ ಗೆಲುವು ಸಾಧಿಸಿದ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಏಕದಿನದಲ್ಲಿ 2-1 ಅಂತರದ ಗೆಲುವಿನ ಮೂಲಕ ಇತಿಹಾಸ ರಚಿಸಿತ್ತು. ಇದೀಗ ಜನವರಿ 23 ರಿಂದ ನ್ಯೂಜಿಲೆಂಡ್ ವಿರುದ್ದದ ಸರಣಿ ಆರಂಭಗೊಳ್ಳಲಿದೆ.