ಇದನ್ನೆಲ್ಲಾ ನೋಡಿದರೆ ಸೆಲ್ಫಿಗೂ ಪ್ರಚಂಡ ಬ್ಯಾಟ್ಸ್'ಮನ್'ಗಳನ್ನು ಸೊನ್ನೆಗೆ ಔಟ್ ಮಾಡಿಸುವ ತಾಕತ್ತು ಇದೆ ಎನ್ನೋ ಅನುಮಾನ ಮೂಡುವಂತೆ ಮಾಡಿದೆ.
ಕ್ರಿಕೆಟ್'ನಲ್ಲಿ ಸಾಕಷ್ಟು ಬಾರಿ ಕಾಕತಾಳೀಯಗಳು ಸಂಭವಿಸುತ್ತವೆ. ಅಂತಹ ಹಲವಾರು ಸಂದರ್ಭಗಳಿಗೂ ನಾವೆಲ್ಲ ಸಾಕ್ಷಿಯಾಗಿರುತ್ತೇವೆ. ಆದರೆ ಈಗ ಸಂಭವಿಸಿರುವ ಸನ್ನಿವೇಷ ಮಾತ್ರ ನಿಜಕ್ಕೂ ಕುತೂಹಲ ಎನಿಸಿಸುತ್ತಿದೆ.
ಅರೆ ಏನಪ್ಪಾ ಇದು ಇಷ್ಟೊಂದು ಪೀಠಿಕೆ ಹಾಕ್ತಾ ಇದಾರೆ ಅಂತಾ ಯೋಚ್ನೆ ಮಾಡ್ತಾ ಇದೀರಾ... ಹೌದು ಇದೀಗ ಸದ್ದು ಮಾಡ್ತಾ ಇರೋದು ದಕ್ಷಿಣ ಆಫ್ರಿಕಾದ ನಾಯಕ ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಆಗಿರೋ ಹಿಂದಿನ ರಹಸ್ಯದ ಬಗ್ಗೆ. ಏಕದಿನ ಕ್ರಿಕೆಟ್'ನಲ್ಲಿ ಇದೇ ಮೊದಲ ಬಾರಿಗೆ ಎಬಿಡಿ ಶೂನ್ಯ ಸುತ್ತಲು, ಮೂರು ವರ್ಷಗಳ ಬಳಿಕ ಕೊಹ್ಲಿ ಗೋಲ್ಡನ್ ಡಕ್'ಗೆ ಬಲಿಯಾಗಲು ಕಾರಣ ಜಹೀರ್ ಅಬ್ಬಾಸ್ ಅಂತೆ..! ಈಕೆ ಪಾಕಿಸ್ತಾನದ ಕ್ರಿಕೆಟ್ ವರದಿಗಾರ್ತಿ ಜಹೀರ್ ಅಬ್ಬಾಸ್ ಎಂದರೆ ನಿಮಗೆ ಆಶ್ಚರ್ಯವಾಗಬಹುದು.
ಹೌದು ಮೊದಲು ಜಹೀರ್ ಅಬ್ಬಾಸ್ ಎಬಿ ಡಿವಿಲಿಯರ್ಸ್ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡ ಬಳಿಕ ಆಫ್ರಿಕಾ ನಾಯಕ ಶೂನ್ಯ ಸುತ್ತಿ ಶಾಕ್ ಅನುಭವಿಸಿದರು. ಇದಾದ ಬೆನ್ನಲ್ಲೇ ಕೊಹ್ಲಿ ಜತೆಗೆ ಸ್ವಂತಿ ತೆಗೆಸಿಕೊಂಡ ಅಬ್ಬಾಸ್ ಲಂಕಾ ವಿರುದ್ಧ ಟೀಂ ಇಂಡಿಯಾ ನಾಯಕ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇದನ್ನೆಲ್ಲಾ ನೋಡಿದರೆ ಸೆಲ್ಫಿಗೂ ಪ್ರಚಂಡ ಬ್ಯಾಟ್ಸ್'ಮನ್'ಗಳನ್ನು ಸೊನ್ನೆಗೆ ಔಟ್ ಮಾಡಿಸುವ ತಾಕತ್ತು ಇದೆ ಎನ್ನೋ ಅನುಮಾನ ಮೂಡುವಂತೆ ಮಾಡಿದೆ.
