ಗಯಾನ(ಆ.11): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಕೆಲ ದಾಖಲೆ ನಿರ್ಮಾಣವಾಗಲಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆ ನಿರ್ಮಿಸಲು ರೆಡಿಯಾಗಿದ್ದಾರೆ. 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 19 ರನ್ ಸಿಡಿಸಿದರೆ, ಪಾಕಿಸ್ತಾನ ಬ್ಯಾಟ್ಸ್‌ಮನ್ ಜಾವೇದ್ ಮಿಯಾಂದಾದ್ ದಾಖಲೆ ಮುರಿಯಲಿದ್ದಾರೆ. 

ಇದನ್ನೂ ಓದಿ: ಇಂಡೋ-ವಿಂಡೀಸ್ ಫೈಟ್: ಮಳೆಯ ಭೀತಿಯಲ್ಲಿ 2ನೇ ಏಕದಿನ ಪಂದ್ಯ..!

ಏಕದಿನ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಗರಿಷ್ಠ ರನ್ ಸಿಡಿಸಿದ ದಾಖಲೆ ಪಾಕ್ ಬ್ಯಾಟ್ಸ್‌ಮನ್ ಜಾವೇದ್ ಮಿಯಾಂದಾದ್ ಹೆಸರಿಲ್ಲಿದೆ. ವಿಯಾಂದಾದ್ ವಿಂಡೀಸ್ ವಿರುದ್ದ 1930 ರನ್ ಸಿಡಿಸಿದ್ದಾರೆ. ಮಿಯಾಂದಾದ್ 64 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಸದ್ಯ ಕೊಹ್ಲಿ 33 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ 1910 ರನ್ ಸಿಡಿಸಿದ್ದಾರೆ. ಇದೀಗ 19 ರನ್ ಸಿಡಿಸಿದರೆ 24 ಇನ್ನಿಂಗ್ಸ್‌ಗಳಲ್ಲಿ ಜಾವೇದ್ ದಾಖಲೆ ಮುರಿಯಲಿದ್ದಾರೆ.

ಇದನ್ನೂ ಓದಿ: ಗೇಲ್ ಜತೆ ಭರ್ಜರಿ ಡ್ಯಾನ್ಸ್ ಮಾಡಿದ ಕೊಹ್ಲಿ..! ವಿಡಿಯೋ ವೈರಲ್‌!

ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದೀಗ ಎರಡನೇ ಏಕದಿನ ಪಂದ್ಯ ರವಿವಾರ(ಆ.11) ರಂದು ಸಂಜೆ 7 ಗಂಟೆಗೆ ಆರಂಭವಾಗಲಿದೆ. ವಿಂಡೀಸ್ ವಿರುದ್ದದ ಟಿ20 ಸರಣಿ ಕೈವಶ ಮಾಡಿರುವ ಭಾರತ, ಇದೀಗ ಏಕದಿನ ಸರಣಿಯತ್ತ ಚಿತ್ತ ಹರಿಸಿದೆ.