ಇಂಡೋ-ವಿಂಡೀಸ್ ಫೈಟ್: ಮಳೆಯ ಭೀತಿಯಲ್ಲಿ 2ನೇ ಏಕದಿನ ಪಂದ್ಯ..!
ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಎರಡನೇ ಪಂದ್ಯ ರೋಚಕತೆ ಹುಟ್ಟುಹಾಕಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಪೋರ್ಟ್ ಆಫ್ ಸ್ಪೇನ್[ಆ.11]: ಪ್ರವಾಸಿ ಭಾರತ ಹಾಗೂ ಆತಿಥೇಯ ವೆಸ್ಟ್ ಇಂಡೀಸ್ ನಡುವಣ 2ನೇ ಏಕ ದಿನ ಪಂದ್ಯ ಭಾನುವಾರದಿಂದ ಇಲ್ಲಿ ಆರಂಭವಾಗಲಿದೆ. ಮೊದಲ ಏಕದಿನ ಪಂದ್ಯ ಮಳೆಗೆ ಆಹುತಿ ಯಾಗಿತ್ತು. ಇದೀಗ 2ನೇ ಪಂದ್ಯಕ್ಕೂ ಕೂಡ ಮಳೆ ಕಂಟಕವಾಗಿ ಕಾಡುವ ಸಾಧ್ಯತೆ ಹೆಚ್ಚಿದೆ. ವಿಶ್ವಕಪ್ ಸೆಮೀಸ್‌ನಲ್ಲಿ ಸೋತು ಹೊರಬಿದ್ದ ಬಳಿಕ ಮೊದಲ ಏಕದಿನ ಸರಣಿಯನ್ನಾಡುತ್ತಿರುವ ಭಾರತ ತಂಡ, ಗೆಲುವಿನ ವಿಶ್ವಾಸದಲ್ಲಿದೆ.
3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಭಾರತ ತಂಡ, ಏಕದಿನ ಸರಣಿಯನ್ನು ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಆದರೆ ಮಳೆ ಭಾರತದ ವಿಶ್ವಾಸಕ್ಕೆ ಧಕ್ಕೆಯನ್ನುಂಟು ಮಾಡಿದೆ. ಟಿ20 ಸರಣಿ ಯಲ್ಲಿ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಲು ವಿಫಲರಾಗಿದ್ದ ಶ್ರೇಯಸ್ ಅಯ್ಯರ್, ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಅದೃಷ್ಟ ಮಾತ್ರ ಕೈಕೊಟ್ಟಂತಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಶ್ರೇಯಸ್‌ಗೆ ಸ್ಥಾನ ಸಿಕ್ಕಿತ್ತು. ಆದರೆ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಮಳೆಯಿಂದಾಗಿ 34 ಓವರ್‌ಗಳಿಗೆ ಸೀಮಿತವಾಗಿದ್ದ ಪಂದ್ಯದಲ್ಲಿ ಕೇವಲ 13 ಓವರ್ ಗಳ ಆಟ ಮಾತ್ರ ನಡೆಸಲಾಗಿತ್ತು. ನಂತರದ ಆಟ ಮಳೆಯಿಂದ ರದ್ದಾಗಿತ್ತು.
ಪಾಕ್ ಕ್ರಿಕೆಟ್ ಕೋಚ್: ಮಿಸ್ಬಾ, ಹೆಸ್ಸನ್ ಸ್ಪರ್ಧೆ
ಭಾರತದ ಯಶಸ್ವಿ ಆರಂಭಿಕ ಜೋಡಿಯಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮತ್ತೊ ಮ್ಮೆ ಕಮಾಲ್ ಮಾಡಲು ಸಜ್ಜಾಗಿದ್ದಾರೆ. 3ನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಗೆ ಇಳಿಯಲಿದ್ದಾರೆ. 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡಲಿದ್ದಾರೆ. ಇದೀಗ 2ನೇ ಏಕದಿನ ಪಂದ್ಯದಲ್ಲಾದರೂ ಶ್ರೇಯಸ್ ಆಡುವ ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ. ಒಂದೊಮ್ಮೆ ಧವನ್ ಅಥವಾ ರೋಹಿತ್ ಗಾಯಗೊಂಡರೆ, ರಾಹುಲ್‌ಗೆ 11ರ ಬಳಗದಲ್ಲಿ ಆಡುವ ಅವಕಾಶ ದೊರೆಯುವ ಸಾಧ್ಯತೆಯಿದೆ. ಕೇದಾರ್ ಜಾಧವ್, 6ನೇ ಕ್ರಮಾಂಕ ದಲ್ಲಿ ರಿಷಭ್ ಪಂತ್ ಆಡುವ ಸಾಧ್ಯತೆಯಿದೆ. ಜಾಧವ್‌ಗೆ ಈ ಸರಣಿ ಮಹತ್ವದ್ದಾಗಿದೆ.
ಕೊಹ್ಲಿ-ರೋಹಿತ್ ಜಗಳದ ಸುದ್ದಿ ನಿಲ್ಲಲ್ಲ..!
ಖಲೀಲ್ ಬದಲು ಸೈನಿ?: ಖಲೀಲ್ ಅಹ್ಮದ್ ಬದಲು 2ನೇ ಏಕದಿನ ಪಂದ್ಯದಲ್ಲಿ ಯುವ ವೇಗಿ ನವದೀಪ್ ಸೈನಿಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ. ಮೊದಲ ಪಂದ್ಯದಲ್ಲಿ ಕೇವಲ 3 ಓವರ್ ಬೌಲಿಂಗ್ ಮಾಡಿದ್ದ ಖಲೀಲ್ 27 ರನ್ ಚಚ್ಚಿಸಿಕೊಂಡಿದ್ದರು. ಹೀಗಾಗಿ ಖಲೀಲ್ ಬದಲಿಗೆ ಸೈನಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ಇನ್ನೂ ಮೊದಲ ಪಂದ್ಯದಲ್ಲಿ 31 ಎಸೆತಗಳಿಂದ ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದ ವಿಂಡೀಸ್‌ನ ಗೇಲ್, 2ನೇ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸುವ ಉತ್ಸಾಹದಲ್ಲಿದ್ದಾರೆ.
ಪಿಚ್ ರಿಪೋರ್ಟ್: ಪೋರ್ಟ್ ಆಫ್ ಸ್ಪೇನ್‌ನ ಪಿಚ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಅಲ್ಲದೇ ಮಳೆಯಿಂದಾಗಿ ಪಿಚ್ ತೇವವಾಗಿರುವುದರಿಂದ ಚೆಂಡು ತಿರುವು ಪಡೆಯುವ ಸಾಧ್ಯತೆ ಹೆಚ್ಚಿರಲಿದೆ. ಟಾಸ್ ಪ್ರಮುಖ ಪಾತ್ರವಹಿಸಲಿದೆ.
ಪಂದ್ಯ ಅರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸೋನಿ ಟೆನ್ 1