ಬೆಂಗಳೂರು(ಸೆ.12): ಸೆ. 24 ರಿಂದ ಅ. 25ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಗೆ ಕರ್ನಾಟಕದ 25 ಸಂಭವನೀಯ ಆಟಗಾರರ ಪಟ್ಟಿಯನ್ನು ಕೆಎಸ್‌ಸಿಎ ಬುಧವಾರ ಪ್ರಕಟಿಸಿದೆ. 

ವಿಜಯ್ ಹಜಾರೆ ಟ್ರೋಫಿಗೆ ದೆಹಲಿ ಸಂಭಾವ್ಯ ತಂಡ ಪ್ರಕಟ; ಕೊಹ್ಲಿಗೆ ಸ್ಥಾನ!

ಕೆಪಿಎಲ್ ಸೇರಿದಂತೆ ದೇಸಿ ಕ್ರಿಕೆಟ್ ಲೀಗ್ ಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಯುವ ಆಟಗಾರರನ್ನು ಸಂಭಾವ್ಯರ ಪಟ್ಟಿಯಲ್ಲಿ ಸೇರಿಸಲಾಗಿದೆ. ವೈಶಾಕ್ ವಿಜಯ್ ಕುಮಾರ್, ಮನೋಜ್ ಬಂಡಗೆ ಸೇರಿದಂತೆ ಇತರ ಆಟಗಾರರು ಸ್ಥಾನ ಪಡೆದಿದ್ದಾರೆ. ಉಳಿದಂತೆ ಹಿರಿಯ ಆಟಗಾರರು ಉಳಿದುಕೊಂಡಿದ್ದಾರೆ.

ಸಂಭಾವ್ಯ ತಂಡ: ಮನೀಶ್ ಪಾಂಡೆ, ರಾಹುಲ್, ಮಯಾಂಕ್, ಕರುಣ್, ದೇವದತ್, ಪವನ್, ಅಭಿಷೇಕ್, ಸಿದ್ಧಾರ್ಥ್, ಕೆ. ಗೌತಮ್, ಶ್ರೇಯಸ್, ಸುಚಿತ್, ಪ್ರವೀಣ್ ದುಬೆ, ಶರತ್ ಬಿ.ಆರ್. ಶರತ್ ಶ್ರೀನಿವಾಸ್, ನಿಹಾಲ್ ಉಳ್ಳಾಲ್, ಮಿಥುನ್, ಪ್ರಸಿದ್ಧ್, ರೋನಿತ್, ಕೌಶಿಕ್, ಪ್ರತೀಕ್, ಮನೋಜ್, ಶುಭಾಂಗ್, ರೋಹನ್ ಕದಂ, ಸಮರ್ಥ್, ವೈಶಾಕ್.