ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಫೈನಲ್‌ಗೇರಿ ಇತಿಹಾಸ ಬರೆದ ದೀಪಕ್!
2019ರ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನ 86 ಕೆ.ಜಿ ವಿಭಾಗದಲ್ಲಿ ದೀಪಕ್ ಪೂನಿಯಾ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಈ ಮೂಲಕ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಪಟು ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ. ದೀಪಕ್ ಚಿನ್ನ ಗೆದ್ದು ಬರಲಿ ಎನ್ನುವುದು ಕೋಟ್ಯಾಂತರ ಭಾರತೀಯರ ಹಾರೈಕೆಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಕಜಕಸ್ತಾನ(ಸೆ.22): ಹಾಲಿ ಜೂನಿಯರ್ ವಿಶ್ವ ಚಾಂಪಿಯನ್ ದೀಪಕ್ ಪೂನಿಯಾ, 2019ರ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನ 86 ಕೆ.ಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದು, ಈ ಆವೃತ್ತಿಯಲ್ಲಿ ಚಿನ್ನದ ಪದಕದ ಸುತ್ತಿಗೇರಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಜತೆಗೆ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 4ನೇ ಭಾರತೀಯ ಕುಸ್ತಿಪಟು ಎನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ. ಕಳೆದ ತಿಂಗಳಷ್ಟೇ ಎಸ್ಟೋನಿಯಾದಲ್ಲಿ ನಡೆದಿದ್ದ ಕಿರಿಯರ ವಿಶ್ವ ಚಾಂಪಿಯನ್ಶಿಪ್ನಲ್ಲಿ ದೀಪಕ್ ಚಿನ್ನ ಜಯಿಸಿದ್ದರು.
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಬೆಳ್ಳಿ ಗದ್ದ ಮೊದಲ ಭಾರತೀಯ ಅಮಿತ್!
ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ದೀಪಕ್, ಸ್ವಿಜರ್‌ಲೆಂಡ್‌ನ ಸ್ಟೀಫನ್ ರೀಚ್‌ಮತ್‌ರನ್ನು 8-2 ಅಂತರದಿಂದ ಸೋಲಿಸಿ ಫೈನಲ್ಗೇರಿದರು. ಭಾನುವಾರ ನಡೆಯುವ ಫೈನಲ್‌ನಲ್ಲಿ 20 ವರ್ಷದ ದೀಪಕ್, ಹಾಲಿ ಒಲಿಂಪಿಕ್ ಚಾಂಪಿಯನ್ ಇರಾನ್‌ನ ಹಸ್ಸನ್ ಯಾಜ್ದಾನಿ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಕೊಲಂಬಿಯಾದ ಕಾರ್ಲೊಸ್ ವಿರುದ್ಧ 7-6ರಲ್ಲಿ ಜಯ ಗಳಿಸಿ ದೀಪಕ್ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿದರು.
ಟೀಂ ಇಂಡಿಯಾ ಬೆಂಗಳೂರಲ್ಲಿ ಟಿ20 ಸರಣಿ ಗೆಲ್ಲುತ್ತಾ..?
ರಾಹುಲ್‌ಗೆ ಕಂಚು?: ಒಲಿಂಪಿಕ್ ವಿಭಾಗವಲ್ಲದ 61 ಕೆ.ಜಿ ಸ್ಪರ್ಧೆಯ ಕಂಚಿನ ಪದಕದ ಪಂದ್ಯಕ್ಕೆ ರಾಹುಲ್ ಅವಾರೆ ಅರ್ಹತೆ ಪಡೆದಿದ್ದಾರೆ. ಈ ಆವೃತ್ತಿಯಲ್ಲಿ ಈಗಾಗಲೇ 3 ಕಂಚು ಗೆದ್ದಿರುವ ಭಾರತಕ್ಕೆ, ದೀಪಕ್ ಚಿನ್ನ ಇಲ್ಲವೇ ಬೆಳ್ಳಿ ಗೆದ್ದುಕೊಡಲಿದ್ದಾರೆ. 2013ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತ 3 ಪದಕ ಜಯಿಸಿದ್ದು ಈ ವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಭಾರತಕ್ಕೆ ಈಗಾಗಲೇ 4ನೇ ಪದಕ ಖಚಿತವಾಗಿದ್ದು, ರಾಹುಲ್ ಗೆದ್ದರೆ ಒಟ್ಟು 5 ಪದಕಗಳೊಂದಿಗೆ ಹಿಂದಿರುಗಲಿದೆ.