ಗೋಲು ಸಿಡಿಸಿ ಗೆಳತಿಗೆ ಪ್ರೇಮ ನಿವೇದನೆ ಮಾಡಿದ ಫುಟ್ಬಾಲ್ ಪಟು!

ವೆನಿಜುವೆಲಾ ಫುಟ್ಬಾಲ್ ಪಟು ಗೋಲು ಸಿಡಿಸಿ ವಿಶಿಷ್ಠ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಗೋಲು ಸಿಡಿಸಿದ ಬಳಿಕ ಗ್ಯಾಲರಿಯಲ್ಲಿ ಕುಳಿತಿದ್ದ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿದ್ದಾರೆ.

Venezuela Striker Eduard Bello Celebrates Goal By Proposing To Girlfriend In The Stands

ವೆನಿಜುವೆಲಾ(ಅ.30): ಫುಟ್ಬಾಲ್ ಪಟುಗಳು ಗೋಲು ಸಿಡಿಸಿದ ಮೇಲೆ ಅವರ ಸಂಭ್ರಮಾಚರಣೆ ವಿಶೇಷ. ಜಂಪ್, ಬ್ಯಾಕ್ ಫ್ಲಿಪ್ ಸೇರಿದಂತೆ ಹಲವು ರೀತಿಯಲ್ಲಿ ಫುಟ್ಬಾಲ್ ಪಟುಗಳು ಸಂಭ್ರಮ ಆಚರಿಸುತ್ತಾರೆ. ಇದೀಗ ವೆನಿಜುವೆಲಾ ಫುಟ್ಬಾಲ್ ಪಟು ಸಂಭ್ರಮಾಚರಣೆ ವಿಶ್ವದೆಲ್ಲಡೆ ಸದ್ದು ಮಾಡುತ್ತಿದೆ.

ವೆನಿಜುವೆಲಾ ಫುಟ್ಬಾಲ್ ಸ್ಟ್ರೈಕರ್ ಎಡ್ವಾರ್ಡ್ ಬೆಲ್ಲೋ ಗೋಲು ಸಿಡಿಸಿ ವಿಶಿಷ್ಠ ರೀತಿಯಲ್ಲಿ ಸಂಭ್ರಮಾಚರಿಸಿದ್ದಾರೆ. ಗೋಲು ಸಿಡಿಸಿದ ಬಳಿಕ ನೇರವಾಗಿ ತನ್ನ ಗೆಳತಿ ಕುಳಿತಿರುವ ಗ್ಯಾಲರಿಯತ್ತ ಓಡಿದ್ದಾರೆ. ಬಳಿಕ ಗೆಳತಿ ಮುಂದೆ ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ್ದಾರೆ.

 

 

ಎಡ್ವಾರ್ಡ್ ಪ್ರಪೋಸ್‌ಗೆ ಗೆಳತಿ ಯೆಸ್ ಎಂದಿದ್ದಾಳೆ. ಆಕೆಯ ಕೈಗೆ ರಿಂಗ್ ತೊಡಿಸಿದ ಎಡ್ವಾರ್ಡ್ ಮತ್ತೆ ಮೈದಾನಕ್ಕೆ ಮರಳಿದ್ದಾರೆ. ಕ್ಷಣಾರ್ಧದಲ್ಲಿ ನಡೆದ ಈ ಘಟನೆ ನೆರೆದಿದ್ದ ಅಭಿಮಾನಿಗಳಿಗೆ ಅಚ್ಚರಿ ತಂದಿತ್ತು. ಎಡ್ವಾರ್ಡ್ ಪ್ರೇಮ ನಿವೇದನೆ ವೀಡಿಯೋ ಇದೀಗ ವೈರಲ್ ಆಗಿದೆ. 

Latest Videos
Follow Us:
Download App:
  • android
  • ios