ಅಭಿಮಾನಿಯ ಈ ವಿಷ್‌ಗೆ ವೀರು ತಮಾಶೆಯಾಗಿ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿ(ಅ.23): ಇದೇ 20 ರಂದು ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್‌ ತಮ್ಮ 38ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅಂದು ವೀರೂಗೆ ಕ್ರಿಕೆಟ್‌ ಜಗತ್ತಿನ ಹಲವು ದಿಗ್ಗಜರು ಸೇರಿದಂತೆ ಇತರ ಕ್ಷೇತ್ರದ ಗಣ್ಯರು, ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಆದರೆ ಓರ್ವ ಅಭಿಮಾನಿ ಮಾತ್ರ ತಡವಾಗಿ ಅಂದ್ರೆ ಶನಿವಾರ ಬೆಳಗ್ಗೆ ಟ್ವಿಟ್ಟರ್‌ ಮೂಲಕ ಸೆಹ್ವಾಗ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.ಅಭಿಮಾನಿಯ ಈ ವಿಷ್‌ಗೆ ವೀರು ತಮಾಶೆಯಾಗಿ ಪ್ರತಿಕ್ರಿಯಿಸಿದ್ದಾರೆ. ನನ್ನ ಹುಟ್ಟುಹಬ್ಬಕ್ಕೆ ಇನ್ನೂ 363 ದಿನಗಳು ಬಾಕಿ ಇವೆ. ನೀವು ಇಷ್ಟು ಬೇಗ ವಿಷ್‌ ಮಾಡೋದಾ...ಅಂತಾ ತಮಾಶೆ ಮಾತನಾಡುತ್ತಾ ಅಭಿಮಾನಿಗೆ ಥ್ಯಾಂಕ್ಯೂ ಹೇಳಿದ್ದಾರೆ.