ದುಬೈ[ಮಾ.18]: ಮೊದಲ ಬಾರಿಗೆ ಟಿ20 ಕ್ರಿಕೆಟ್‌ ಆಡಿದ ಅಮೆರಿಕ, ಯುಎಇ ವಿರುದ್ಧ ಸೋಲು ಕಂಡು ಸರಣಿ ಕೈಚೆಲ್ಲಿದೆ. 

ಇಲ್ಲಿ ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಯುಎಇ 7 ವಿಕೆಟ್‌ಗೆ 182 ರನ್‌ ಗಳಿಸಿತು. ಸವಾಲಿನ ಗುರಿ ಬೆನ್ನತ್ತಿದ ಅಮೆರಿಕ 6 ವಿಕೆಟ್‌ಗೆ 158 ರನ್‌ ಗಳಿಸಿ 24 ರನ್‌ಗಳ ಸೋಲು ಕಂಡಿತು. ಮೊದಲ ಪಂದ್ಯದಲ್ಲಿ ಫಲಿತಾಂಶ ಬಾರದ ಕಾರಣ ಸರಣಿ 1-0ಯಲ್ಲಿ ಯುಎಇ ಪಾಲಾಯಿತು.

ಚೊಚ್ಚಲ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಆಡಿದ ಅಮೆರಿಕ

ಇದೀಗ ಅಮೆರಿಕ ತಂಡವು ಮಾರ್ಚ್ 25 ಹಾಗೂ ಮಾರ್ಚ್ 28ರಂದು ಐರ್ಲೆಂಡ್ ವಿರುದ್ಧವೇ 2 ಏಕದಿನ ಪಂದ್ಯಗಳ ಸರಣಿ ಆಡಲಿದೆ. 

ಸ್ಕೋರ್‌: ಯುಎಇ 182/7, ಅಮೆರಿಕ 158/6