ಮೊರಟುವಾ(ಸೆ.08): ಆರಂಭಿಕ ಅರ್ಜುನ್‌ ಅಜಾದ್‌ ಹಾಗೂ ತಿಲಕ್‌ ವರ್ಮಾ ಭರ್ಜರಿ ಶತಕದ ನೆರವಿನಿಂದ ಅಂಡರ್‌ 19 ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ತಂಡ, ಬದ್ಧ ವೈರಿ ಪಾಕಿಸ್ತಾನ ವಿರುದ್ಧ 60 ರನ್‌ಗಳ ಗೆಲುವು ದಾಖಲಿಸಿದೆ. 

36ರ ಹರೆಯದಲ್ಲಿ ಮಾಲಿಂಗ ಹ್ಯಾಟ್ರಿಕ್; ಸಾಧನೆ ಕೊಂಡಾಡಿದ ಫ್ಯಾನ್ಸ್!

ಭಾರತ ನೀಡಿದ ಬೃಹತ್‌ ಗುರಿ ಬೆನ್ನತ್ತಿದ ಪಾಕಿಸ್ತಾನ, ನಾಯಕ ರೊಹೈಲ್‌ ನಜೀರ್‌ (117), ಮೊಹಮದ್‌ ಹ್ಯಾರೀಸ್‌ (43) ಹೋರಾ​ಟದ ಹೊರ​ತಾ​ಗಿಯೂ 46.4 ಓವರಲ್ಲಿ 245 ರನ್‌ಗಳಿಗೆ ಆಲೌಟ್‌ ಆಯಿತು. 

ಚಂದ್ರಯಾನ 2: ISRO ಬೆನ್ನಿಗೆ ನಿಂತ ಟೀಂ ಇಂಡಿಯಾ ಕ್ರಿಕೆಟರ್ಸ್!

ಭಾರತದ ಪರ ಅಥರ್ವ 3, ಕರ್ನಾ​ಟ​ಕದ ವಿದ್ಯಾಧರ್‌ ಪಾಟೀಲ್‌, ಸುಶಾಂತ್‌ ಮಿಶ್ರಾ ತಲಾ 2 ವಿಕೆಟ್‌ ಪಡೆದರು. ಇದಕ್ಕೂ ಮುನ್ನ ಭಾರತ ಅರ್ಜುನ್‌ (121), ತಿಲಕ್‌ (110) ಶತ​ಕ​ದ ನೆರವಿನಿಂದ 50 ಓವರಲ್ಲಿ 9 ವಿಕೆಟ್‌ಗೆ 305 ರನ್‌ ಗಳಿಸಿತ್ತು.

ಸ್ಕೋರ್‌: ಭಾರತ 305/9, ಪಾಕಿಸ್ತಾನ 245/10