ಬೆಂಗಳೂರು[ನ.03]: ಏಕಲವ್ಯ ಪ್ರಶಸ್ತಿಗೆ ಒಂದೇ ವಿಭಾಗದಲ್ಲಿ ಇಬ್ಬರು ಆಟಗಾರರನ್ನು ಪರಿಗಣಿಸುವುದು ತಪ್ಪಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ. 

2012ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಈಜು ಮತ್ತು ಸ್ಕೇಟಿಂಗ್‌ ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ಆಟಗಾರರನ್ನು ಆಯ್ಕೆ ಮಾಡಿದ್ದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಇದನ್ನು ಓದಿ: ಸುಕೇಶ್ ಹೆಗ್ಡೆ ಸೇರಿದಂತೆ 13 ಸಾಧಕರಿಗೆ ಏಕಲವ್ಯ ಪ್ರಶಸ್ತಿ

2012ನೇ ಸಾಲಿನ ಪ್ರಶಸ್ತಿಗೆ ಸ್ಕೇಟಿಂಗ್‌ ಪಟು ಚಿರಂತನ್‌ ಭಾರದ್ವಾಜ್‌ ಹಾಗೂ ಅದೇ ವಿಭಾಗದಲ್ಲಿ ವರ್ಷ ಎಸ್‌.ಪುರಾಣಿಕ್‌ ಮತ್ತು ಸಂಜನಾ ಶ್ರೀನಿವಾಸ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಹಾಗೆಯೇ, ಈಜು ವಿಭಾಗದಲ್ಲಿ ಟಿ.ಸ್ನೇಹಾ ಹಾಗೂ ಈಜುಗಾರ ಜೆ.ಪಿ.ವರಣ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಕ್ರಮವನ್ನು ಚಿರಂತನ್‌ ಭಾರದ್ವಾಜ್‌ ಮತ್ತು ಟಿ. ಸ್ನೇಹಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.