ಸುಕೇಶ್ ಹೆಗ್ಡೆ ಸೇರಿದಂತೆ 13 ಸಾಧಕರಿಗೆ ಏಕಲವ್ಯ ಪ್ರಶಸ್ತಿ

First Published 5, Mar 2018, 7:09 PM IST
Sukesh Hegde Ayyappa and other Sports Persons to get Ekalavya awards
Highlights

ಕ್ರೀಡಾ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಸರ್ಕಾರ ಏಕಲವ್ಯ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿ ಪಟ್ಟಿ ಇಲ್ಲಿದೆ ನೋಡಿ..

ಉಡುಪಿ(ಮಾ.05): 2016ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟಗೊಂಡಿದ್ದು ಸ್ಟಾರ್ ಕಬಡ್ಡಿ ಪಟು ಸುಕೇಶ್ ಹೆಗ್ಡೆ, ಹಾಕಿ ಆಟಗಾರ ಎಂ.ಬಿ ಅಯ್ಯಪ್ಪ ಸೇರಿದಂತೆ 13 ಮಂದಿಗೆ ಏಕಲವ್ಯ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹಾಗೆಯೇ ಅಥ್ಲೀಟಿಕ್ಸ್ ಪಟು ವಿ.ಆರ್.ಬೀಡು ಹಾಗೂ ಎಂ.ಆರ್ ಮೋಹಿತೆ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ದಕ್ಕಿದೆ. ಉಡುಪಿಯಲ್ಲಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಪ್ರಶಸ್ತಿ ಪಟ್ಟಿಯನ್ನು ಘೋಷಣೆ ಮಾಡಿದರು.

ಕ್ರೀಡಾ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಸರ್ಕಾರ ಏಕಲವ್ಯ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿ ಪಟ್ಟಿ ಇಲ್ಲಿದೆ ನೋಡಿ..

ಹರ್ಷಿತ್ ಎಸ್ ( ಅಥ್ಲೆಟಿಕ್ಸ್), ರಾಜೇಶ್ ಪ್ರಕಾಶ್ ಉಪ್ಪಾರ್ ( ಬಾಸ್ಕೆಟ್ ಬಾಲ್), ಪೂರ್ವಿಷಾ ಎಸ್.ರಾಮ್( ಬ್ಯಾಡ್ಮಿಂಟನ್), ರೇಣುಕಾ ದಂಡಿನ್ ( ಸೈಕ್ಲಿಂಗ್), ಮಯೂರ್ ಡಿ ಭಾನು ( ಶೂಟಿಂಗ್), ಕಾರ್ತಿಕ್ ಎ ( ವಾಲಿಬಾಲ್), ಮಾಳವಿಕ ವಿಶ್ವನಾಥ್( ಈಜು), ಕೀರ್ತನಾ ಟಿ.ಕೆ ( ರೋಯಿಂಗ್), ಅಯ್ಯಪ್ಪ ಎಂ.ಬಿ.( ಹಾಕಿ), ಸುಕೇಶ್ ಹೆಗ್ಡೆ( ಕಬ್ಬಡ್ಡಿ)

ಗುರುರಾಜ( ಭಾರ ಎತ್ತುವುದು), ಸಂದೀಪ್ ಬಿ ಕಾಟೆ( ಕುಸ್ತಿ), ರೇವತಿ ನಾಯಕ ಎಂ( ವಿಕಲ ಚೇತನ ಮಹಿಳಾ ಈಜುಪಟು)

 ಇದೇ ವೇಳೆ 2016ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಕೂಡಾ ಪ್ರಕಟಗೊಂಡಿದೆ. ಅದರ ವಿವರ ಇಲ್ಲಿದೆ.

ಸೈಯ್ಯದ್ ಫತೇಶಾವಲಿ ಹೆಚ್ ಬೇಪಾರಿ ( ಆಟ್ಯಾ ಪಾಟ್ಯ), ಯಶಸ್ವಿನಿ ಕೆ.ಜಿ ( ಬಾಲ್ ಬ್ಯಾಡ್ಮಿಂಟನ್), ಶೇಖರ್ ವಾಲಿ ( ಗುಂಡು ಎತ್ತುವುದು), ಯುವರಾಜ್ ಜೈನ್ ( ಕಂಬಳ)

ಮುನ್ನೀರ್ ಭಾಷಾ( ಖೊ ಖೋ), ಸುಗುಣ ಸಾಗರ್ ಹೆಚ್ ವಡ್ರಾಳೆ( ಮಲ್ಲಕಂಬ), ಸಬಿಯಾ ಎಸ್(ಥ್ರೋ ಬಾಲ್), ಆತ್ಮಶ್ರೀ ಹೆಚ್ ಎಸ್( ಕುಸ್ತಿ), ಧನುಷ್ ಬಾಬು( ರೋಲರ್ ಸ್ಕೇಟಿಂಗ್)

ಜೀವಮಾನದ ಸಾಧನೆ ಪ್ರಶಸ್ತಿ

ವಿ.ಆರ್.ಬೀಡು ( ಅಥ್ಲೆಟಿಕ್ಸ್), ಎಂ.ಆರ್.ಮೋಹಿತೆ( ಈಜು)

loader