ಮುಂಬೈ(ಮಾ.04): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಸದಾ ಟ್ವೀಟ್ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಇದೀಗ ಮತ್ತೊಮ್ಮೆ ಟ್ವಿಟರಿಗರಿಗೆ ಆಹಾರವಾಗಿದ್ದಾರೆ. ಇದೀಗ ಏಕದಿನ ಕ್ರಿಕೆಟ್ ಓವರ್ ಕುರಿತು ಟ್ವೀಟ್ ಮಾಡಿ, ಟ್ರೋಲ್ ಆಗಿದ್ದಾರೆ.

ಇದನ್ನೂ ಓದಿ: ಪಾಕ್‌ ಆಟಗಾರರಿಗೆ ವೀಸಾ: ಬಿಸಿಸಿಐ ಮೇಲೆ ಐಸಿಸಿ ಒತ್ತಡ!

ಏಕದಿನ ಕ್ರಿಕೆಟ್‌ನ 50 ಓವರ್‌ಗಳಲ್ಲಿ 10 ಓವರ್ ಹೆಚ್ಚಾದಂತೆ ಅನಿಸುತ್ತಿದೆ ಎಂದು ಮಂಜ್ರೇಕರ್ ಟ್ವೀಟ್ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಗೆಲುವು ದಾಖಲಿಸಿತ್ತು. ಇದರ ಬಳಿಕ ಮಂಜ್ರೇಕರ್ ಈ ರೀತಿ ಟ್ವೀಟ್ ಮಾಡಿದ್ದರು.

 

 

ಇದನ್ನೂ ಓದಿ: ದ್ರಾವಿಡ್ ಹೆಸರಲ್ಲಿ ಹಾಡು: ವಿಡಿಯೋ ಭಾರೀ ವೈರಲ್..!

ಮಂಜ್ರೇಕರ್ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ನಮಗೂ ಕೂಡ ಮಂಜ್ರೇಕರ್ ಕಮೇಂಟೇಟರಿ ಮಾಡುತ್ತಿದ್ದಾಗ 10 ಓವರ್ 50 ಓವರ್ ರೀತಿ ಅನಿಸುತ್ತದೆ ಎಂದು ಟ್ರೋಲ್ ಮಾಡಿದ್ದಾರೆ.