ನವದೆಹಲಿ[ಮಾ.03]: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಹೆಸರಲ್ಲಿ ‘ದಿ ರೀವಿಸಿಟ್‌ ಪ್ರಾಜೆಕ್ಟ್’ ಎನ್ನುವ ಮ್ಯೂಸಿಕ್‌ ಬ್ಯಾಂಡ್‌ ಹಾಡೊಂದನ್ನು ರಚಿಸಿದೆ. 

ಈ ಹಾಡಿಗೆ ‘ಸರ್‌ ದ್ರಾವಿಡ್‌’ ಎಂದು ಹೆಸರಿಟ್ಟಿದ್ದು, ದ್ರಾವಿಡ್‌ರ ಸಾಧನೆಗಳ ಬಗ್ಗೆ ಮೆಲುಕು ಹಾಕಲಾಗಿದೆ. 2003ರಲ್ಲಿ ಅಡಿಲೇಡ್‌ನಲ್ಲಿ ಅವರು ಬಾರಿಸಿದ 233 ಹಾಗೂ ಅಜೇಯ 72 ರನ್‌, ಕೋಲ್ಕತಾದಲ್ಲಿ ಆಸ್ಪ್ರೇಲಿಯಾ ವಿರುದ್ಧ ಲಕ್ಷ್ಮಣ್‌ ಜತೆ ಅವರಾಡಿದ 374 ರನ್‌ಗಳ ಜೊತೆಯಾಟ ಹೀಗೆ ಅವಿಸ್ಮರಣೀಯ ಇನ್ನಿಂಗ್ಸ್‌ಗಳನ್ನು ಕೊಂಡಾಡಲಾಗಿದೆ. ಯುಟ್ಯೂಬ್‌ನಲ್ಲಿ ಈ ಹಾಡು ಭಾರೀ ಹಿಟ್‌ ಆಗಿದ್ದು, ಸಾಮಾಜಿಕ ತಾಣಗಳಲ್ಲೂ ವೈರಲ್‌ ಆಗಿದೆ.

’ದ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಭಾರತ ಪರ ಟೆಸ್ಟ್ ಕ್ರಿಕೆಟ್’ನಲ್ಲಿ 164 ಹಾಗೂ ಏಕದಿನ ಕ್ರಿಕೆಟ್’ನಲ್ಲಿ 344 ಪಂದ್ಯಗಳನ್ನಾಡಿ ಕ್ರಮವಾಗಿ 13288 ಹಾಗೂ 10889 ರನ್ ಬಾರಿಸಿದ್ದಾರೆ.