ಪಾರ್ಥಿವ್ ಪಟೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಶನಿವಾರ ಚೊಚ್ಚಲ ಐಪಿಎಲ್ ಪದಾರ್ಪಣ ಪಂದ್ಯವನ್ನಾಡಿದರು. ಕ್ವಿಂಟಾನ್ ಡಿಕಾಕ್ ಬದಲು ಸ್ಥಾನಪಡೆದ ಪಾರ್ಥಿವ್ ಸಿಕ್ಕ ಅವಕಾಶದಲ್ಲೇ ಭರ್ಜರಿ ಅರ್ಧಶತಕ ಸಿಡಿಸಿದರು. ಆದರೆ ಉಳಿದ ಬ್ಯಾಟ್ಸ್’ಮನ್’ಗಳ ದಯಾನೀಯ ವೈಫಲ್ಯದಿಂದಾಗಿ ಸಿಎಸ್’ಕೆಗೆ ಶರಣಾಯಿತು.
ಪಟೇಲ್ ಯಡವಟ್ಟು ಮಾಡಿದ್ದೆಲ್ಲಿ..?
ರೈನಾ 11 ರನ್’ಗಳಿಸಿದ್ದಾಗ ಪಾರ್ಥಿವ್ ಪಟೇಲ್ ರನೌಟ್ ಅವಕಾಶವನ್ನು ಕೈಚೆಲ್ಲಿದರು. ಇನ್ನು ಕಾಲಿನ್ ಡಿ ಗ್ರಾಂಡ್’ಹೋಂ ಬೌಲಿಂಗ್’ನಲ್ಲಿ ಡ್ವೇನ್ ಬ್ರಾವೋ ವಿಕೆಟ್ ಪಡೆಯುವ ಸಾಧ್ಯತೆಯಿತ್ತು. ಆದರೆ ಸುಲಭ ಕ್ಯಾಚ್ ಕೈಚೆಲ್ಲುವುದರ ಜೊತೆಗೆ ಪಂದ್ಯವನ್ನೂ ಕೈಚೆಲ್ಲಬೇಕಾಗಿ ಬಂತು.
ಪಾರ್ಥಿವ್ ಪಟೇಲ್ ಕ್ಯಾಚ್ ಕೈಚೆಲ್ಲಿದ್ದನ್ನು ಟ್ವಿಟರಿಗರು ಟ್ರೋಲ್ ಮಾಡಿದ್ದು ಹೀಗೆ...