ಕ್ರಿಕೆಟಿಗ ಎಸ್ ಶ್ರೀಶಾಂತ್ ಕಟ್ಟು ಮಸ್ತು ದೇಹ ಬೆಳೆಸಿರೋದಕ್ಕೆ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ನೆಟ್ಟಿಗರು , ಕ್ರಿಕೆಟಿಗ ಹರ್ಭಜನ್ ಸಿಂಗ್‌ಗೆ ಟ್ರೋಲ್ ಮಾಡಿದ್ದಾರೆ. ಶ್ರೀಶಾಂತ್ ಜಿಮ್ ಬಾಡಿಯಿಂದ ಹರ್ಭಜನ್ ಸಿಂಗ್ ಟ್ರೋಲ್ ಆಗಿದ್ದು ಯಾಕೆ? ಇಲ್ಲಿದೆ ಟ್ವಿಟರ್ ಪ್ರತಿಕ್ರಿಯೆ.
ತಿರುವನಂತಪುರ(ಜು.09): ವಿವಾದಿತ ವೇಗಿ ಎಸ್ ಶ್ರೀಶಾಂತ್ ಸಿನಿಮಾ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಿದ್ಧತೆ ನಡೆಸುತ್ತಿದ್ದಾರೆ. ಇದಕ್ಕಾಗಿ ಕಟ್ಟು ಮಸ್ತು ದೇಹ ಮಾಡಿಕೊಂಡಿರುವ ಶ್ರೀಶಾಂತ್ ಬಾರಿ ಸದ್ದು ಮಾಡುತ್ತಿದ್ದಾರೆ.
ಶ್ರೀಶಾಂತ್ ಬಾಡಿ ಬಿಲ್ಡ್ ನೋಡಿದ ಅಭಿಮಾನಿಗಳು ಬಾಹುಬಲಿ ಎಂದು ಕರೆದಿದ್ದಾರೆ. ಆದರೆ ನೆಟ್ಟಿಗರ ಅಭಿಪ್ರಾಯ ಅಲ್ಲಿಗೆ ಮುಗಿದಿಲ್ಲ. ಶ್ರೀಶಾಂತ್ ಜಿಮ್ ಬಾಡಿಗೆ, ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ರೋಲ್ ಆಗಿದ್ದಾರೆ.
ಇದನ್ನು ಓದಿ: ಕ್ರಿಕೆಟಿಗ ಎಸ್ ಶ್ರೀಶಾಂತ್ ಈಗ ಹೇಗಾಗಿದ್ದಾರೆ ಗೊತ್ತಾ?
2008ರ ಐಪಿಎಲ್ ಟೂರ್ನಿಯಲ್ಲಿ ಹರ್ಭಜನ್ ಸಿಂಗ್, ವೇಗಿ ಶ್ರೀಶಾಂತ್‌ಗೆ ಕಪಾಳ ಮೋಕ್ಷ ಮಾಡಿದ್ದರು. ಇದೀಗ ಶ್ರೀಶಾಂತ್ ಜಿಮ್ ಬಾಡಿ ನೋಡಿ ಹರ್ಭಜನ್ ಸಿಂಗ್ ಮತ್ತೊಮ್ಮೆ ಕಪಾಳಮೋಕ್ಷ ಮಾಡೋ ಮನಸ್ಸು ಮಾಡುವುದಿಲ್ಲ ಎಂದು ಟ್ವೀಟ್ ಮೂಲಕ ಟ್ರೋಲ್ ಮಾಡಿದ್ದಾರೆ.
ಮಲೆಯಾಳಂ ಸೇರಿದಂತೆ ಬಾಲಿವುಡ್ ಚಿತ್ರಗಳಲ್ಲಿ ಈಗಾಗಲೇ ನಾಯಕ ಹಾಗೂ ಪೋಷಕ ನಟನಾಗಿ ನಟಿಸಿರುವ ಶ್ರೀಶಾಂತ್ ಇದೀಗ ಹೊಸ ಚಿತ್ರಕ್ಕಾಗಿ ಈ ಅವತಾರವೆತ್ತಿದ್ದಾರೆ. ಶ್ರೀ ಕಟ್ಟು ಮಸ್ತಾದ ದೇಹಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.
