ಬಿಸಿಸಿಐ ನಿಷೇಧಕ್ಕೊಳಗಾಗಿರುವ ವೇಗಿ ಎಸ್ ಶ್ರೀಶಾಂತ್ ಈಗ ಸಿನಿಮಾ ಲೋಕದಲ್ಲಿ ಬ್ಯೂಸಿಯಾಗಿದ್ದಾರೆ.  ಸಿನಿಮಾಗಾಗಿ ಎಸ್ ಶ್ರೀಶಾಂತ್ ಈಗ ಬಾಹುಬಲಿ ನಟ ಪ್ರಭಾಸ್‌ನ್ನೂ ಮೀರಿಸಿದ್ದಾರೆ. ಹಾಗಾದರೆ ಶ್ರೀಶಾಂತ್ ಹೊಸ ಅವತಾರ ಹೇಗಿದೆ? ಇಲ್ಲಿದೆ .

ತಿರುವನಂತಪುರಂ(ಜು.08): ಬಿಸಿಸಿಐನಿಂದ ನಿಷೇಧಕ್ಕೆ ಗುರಿಯಾಗಿರುವ ಕೇರಳ ಕ್ರಿಕೆಟಿಗ ಶ್ರೀಶಾಂತ್‌, ಈಗ ಸಿನಿಮಾಗಳತ್ತ ಹೆಚ್ಚಿನ ಗಮನ ಹರಿಸಿದ್ದಾರೆ. ಹೊಸ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದ್ದು, ಅದಕ್ಕಾಗಿ ಕಟ್ಟುಮಸ್ತಾದ ದೇಹ ಬೆಳಸಿದ್ದಾರೆ. 

View post on Instagram

ಶ್ರೀಶಾಂತ್‌ ಜಿಮ್‌ನಲ್ಲಿ ತಮ್ಮ ಟ್ರೈನರ್‌ ಜತೆ ಇರುವ ಫೋಟೋವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಫೋಟೋ ನೋಡಿ ಅಭಿಮಾನಿಗಳು ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದು, ‘ಬಾಹುಬಲಿ’ಯನ್ನು ನೋಡಿದಂತೆಯೇ ಆಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

View post on Instagram

ಮಲೆಯಾಳಂ ಸೇರಿದಂತೆ ಬಾಲಿವುಡ್ ಚಿತ್ರಗಳಲ್ಲಿ ಈಗಾಗಲೇ ನಾಯಕ ಹಾಗೂ ಪೋಷಕ ನಟನಾಗಿ ನಟಿಸಿರುವ ಶ್ರೀಶಾಂತ್ ಇದೀಗ ಹೊಸ ಚಿತ್ರಕ್ಕಾಗಿ ಈ ಅವತಾರವೆತ್ತಿದ್ದಾರೆ. ಶ್ರೀ ಕಟ್ಟು ಮಸ್ತಾದ ದೇಹಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.

View post on Instagram

2013ರ ಐಪಿಎಲ್ ಟೂರ್ನಿಯಲ್ಲಿ ಸ್ಫಾಟ್ ಫಿಕ್ಸಿಂಗ್ ಆರೋಪ ಎದುರಿಸಿದ ಎಸ್ ಶ್ರೀಶಾಂತ್‌ಗೆ ಬಿಸಿಸಿಐ ಆಜೀವ ನಿಷೇಧದ ಶಿಕ್ಷೆ ವಿಧಿಸಿದೆ. ಶ್ರೀಶಾಂತ್ ಸ್ಫಾಟ್ ಫಿಕ್ಸಿಂಗ್ ಆರೋಪಗಳಿಗೆ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ. ಆದರೆ ಬಿಸಿಸಿಐ ನಿಷೇಧವನ್ನ ವಾಪಾಸ್ ಪಡೆದಿಲ್ಲ. ಇದಕ್ಕಾಗಿ ಶ್ರೀಶಾಂತ್, ಬಿಸಿಸಿಐ ವಿರುದ್ಧ ಕಾನೂನು ಹೋರಾಟ ಮುಂದುವರಿಸಿದ್ದಾರೆ.