ಮುಂಬೈ(ಏ.16): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ಪಂಜಾಬ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ನಿರಾಳರಾಗಿದ್ದ ಬೆಂಗಳೂರು ಅಭಿಮಾನಿಗಳಿಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಸೋಲು ಮತ್ತೆ ಆಘಾತ ತಂದಿದೆ. ಸೋಲಿಗೆ ಅಂತಿಮ ಹಂತದಲ್ಲಿ ಪಂದ್ಯವನ್ನು ಕೈಚೆಲ್ಲಿದ RCB ನಿರ್ಧಾರಗಳು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ 19ನೇ ಓವರ್ ಸೋಲಿಗೆ ಕಾರಣ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ.

ಇದನ್ನೂ ಓದಿ: IPL 2019: RCB ಸೋಲಿಗೆ ಮತ್ತೊಂದು ಸೇರ್ಪಡೆ- ಪ್ಲೇ ಆಫ್ ಕನಸು ಭಗ್ನ!

ಮುಂಬೈ ಗೆಲುವಿಗೆ ಅಂತಿಮ 12 ಎಸೆತದಲ್ಲಿ 22 ರನ್ ಅವಶ್ಯಕತೆ ಇತ್ತು. ನಾಯಕ ವಿರಾಟ್ ಕೊಹ್ಲಿ ನವದೀಪ್ ಸೈನಿಗೆ ಓವರ್ ನೀಡಲು ನಿರ್ಧರಿಸಿದ್ದರು. ಆದರೆ ಡಗೌಟ್‌ನಲ್ಲಿದ್ದ ಬೌಲಿಂಗ್ ಕೋಚ್ ಆಶಿಶ್ ನೆಹ್ರಾ, ಪವನ್ ನೇಗಿಗೆ ಬೌಲಿಂಗ್ ನೀಡುವಂತೆ ಕೈಸನ್ನೆ ಮಾಡಿದರು. ಹೀಗಾಗಿ ಕೊಹ್ಲಿ ತಮ್ಮ ನಿರ್ಧಾರ ಬದಲಿಸಿದರು. ಪವನ್ ನೇಗಿಗೆ ಬೌಲಿಂಗ್ ನೀಡಿದರು.

ಇದನ್ನೂ ಓದಿ: IPL 2019: ಹೈದರಾಬಾದ್-ರಾಜಸ್ಥಾನ ತಂಡಕ್ಕೆ ಮತ್ತೊಂದು ಶಾಕ್!

ನೇಗಿ ಕೈಗೆ ಬಾಲ್ ನೀಡಿದ್ದೇ ಬಂತು, ಕ್ಷಣಾರ್ಧದಲ್ಲಿ ಏನು ನಡೆಯಿತು ಅನ್ನೋದೇ ನಾಯಕ ಕೊಹ್ಲಿಗೆ ತಿಳಿಯಲಿಲ್ಲ. ಹಾರ್ಧಿಕ್ ಪಾಂಡ್ಯ 2 ಸಿಕ್ಸರ್ , 2 ಬೌಂಡರಿ ಸೇರಿದಂತೆ 19ನೇ ಓವರ್‌ನಲ್ಲೇ ಮುಂಬೈಗೆ ಗೆಲುವು ತಂದುಕೊಟ್ಟರು. ಇದೀಗ 19ನೇ ಓವರ್ ಪಂದ್ಯದ ಸೋಲಿಗೆ ಕಾರಣವಾಗಿದೆ ಅನ್ನೋ ಮಾತು ಕೇಳಿಬಂದಿದೆ. ನೆಹ್ರಾ ಸಲಹೆ ದುಬಾರಿಯಾಗಿದೆ.  ಇದೀಗ ನೆಹ್ರಾ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿದೆ.