ಸಿಡ್ನಿ(ಏ.15): ಕ್ರಿಕೆಟ್ ಆಸ್ಟ್ರೇಲಿಯಾ 2019ರ ವಿಶ್ವಕಪ್ ಟೂರ್ನಿಗೆ ತಂಡ ಪ್ರಕಟಿಸಿದೆ. ಕಳೆದೊಂದು ವರ್ಷ ನಿಷೇದ ಶಿಕ್ಷೆ ಅನುಭವಿಸಿ ಇದೀಗ ಮುಕ್ತರಾಗಿರುವ ಆಸಿಸ್ ತಂಡದ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹೀಗಾಗಿ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡ ಪ್ರತಿನಿದಿಸುತ್ತಿರುವ ಈ ಇಬ್ಬರು ಕ್ರಿಕೆಟಿಗರು ಐಪಿಎಲ್ ನಾಕೌಟ್ ಪಂದ್ಯಕ್ಕೆ ಗೈರಾಗಲಿದ್ದಾರೆ.

ಮೇ 30 ರಿಂದ ವಿಶ್ವಕಪ್ ಟೂರ್ನಿ ಆರಂಬಗೊಳ್ಳಲಿದೆ. ಆದರೆ ಮೇ ಆರಂಭದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ತರಬೇಟಿ ಶಿಬಿರ ಆಯೋಜಿಸಿದೆ. ವಿಶ್ವಕಪ್ ಟೂರ್ನಿಗೆ ಆಯ್ಕೆಯಾದ ಆಟಗಾರರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಐಪಿಎಲ್ ನಾಕೌಟ್ ಪಂದ್ಯದಿಂದ ವಾರ್ನರ್ ಹಾಗೂ ಸ್ಮಿತ್ ಹೊರಗುಳಿಯಲಿದ್ದಾರೆ.

ನಿಷೇದದ ಬಳಿಕ ಐಪಿಎಲ್ ಟೂರ್ನಿಗೆ ಎಂಟ್ರಿಕೊಟ್ಟ ಸ್ಮಿತ್ ಹಾಗೂ ವಾರ್ನರ್ ಕ್ರಿಕೆಟ್ ಆಸ್ಟ್ರೇಲಿಯಾ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಾರ್ನರ್ ಹಳೇ ಫಾರ್ಮ್‌ಗೆ ಮರಳಿದ್ದಾರೆ. ಆದರೆ ಸ್ಟೀವ್ ಸ್ಮಿತ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲಾವಾಗಿದ್ದಾರೆ. ಇದೀಗ ಇವರಿಬ್ಬರೂ ಆ್ಯರೋನ್ ಫಿಂಚ್ ನಾಯಕತ್ವದಲ್ಲಿ ವಿಶ್ವಕಪ್ ಟೂರ್ನಿ ಆಡಲಿದ್ದಾರೆ.