ಕಿಂಗ್ಸ್‌ಟನ್[ಸೆ.02]: ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಮ್ಮೆ ಸಿಕ್ಕ ಅವಕಾಶವನ್ನು ಕೈಚೆಲ್ಲಿದ್ದಾರೆ. 

ಹೊಸ ಮೈಲಿಗಲ್ಲು ನಿರ್ಮಿಸಿದ ಪಂತ್; ಧೋನಿ ದಾಖಲೆ ಉಡೀಸ್!

ಹೌದು, ಕಳೆದೊಂದು ವರ್ಷದಿಂದಲೂ ಟೆಸ್ಟ್ ಕ್ರಿಕೆಟ್’ನಲ್ಲಿ ಫ್ಲಾಫ್ ಶೋ ನೀಡುತ್ತಿರುವ ರಾಹುಲ್, ವಿಂಡೀಸ್ ವಿರುದ್ಧದ ಸರಣಿಯಲ್ಲಾದರೂ ಫಾರ್ಮ್ ಕಂಡುಕೊಳ್ಳಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಎರಡನೇ ಟೆಸ್ಟ್’ನ ಎರಡು ಇನಿಂಗ್ಸ್ ಸೇರಿ ಕೇವಲ 19 ರನ್’ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ನಿರೀಕ್ಷೆಯನ್ನು ಹುಸಿಗೊಳಿಸಿದರು. ಮೊದಲ ಇನಿಂಗ್ಸ್’ನಲ್ಲಿ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದ ರಾಹುಲ್, ಎರಡನೇ ಇನಿಂಗ್ಸ್’ನಲ್ಲಿ 63 ಎಸೆತಗಳನ್ನು ಎದುರಿಸಿ ಕೇವಲ 6 ರನ್ ಗಳಿಸಿ ಕೀಮರ್ ರೋಚ್’ಗೆ ವಿಕೆಟ್ ಒಪ್ಪಿಸಿದರು.

ಕಿಂಗ್ಸ್‌ಟನ್ ಟೆಸ್ಟ್: ಭಾರತದ ಬಿಗಿ ಹಿಡಿತದಲ್ಲಿ ಕೆರಿಬಿಯನ್ನರು

ಕೆ.ಎಲ್ ರಾಹುಲ್ 2018ರಿಂದೀಚೆಗೆ ಟೆಸ್ಟ್ ಕ್ರಿಕೆಟ್’ನಲ್ಲಿ ಇದುವರೆಗೂ 27 ಇನಿಂಗ್ಸ್ ಆಡಿದ್ದು, 22.23ರ ಸರಾಸರಿಯಲ್ಲಿ 578 ರನ್ ಬಾರಿಸಿದ್ದಾರೆ. ಇನ್ನು ಆಫ್ಘಾನಿಸ್ತಾನ ವಿರುದ್ಧ 54 ಹಾಗೂ ಇಂಗ್ಲೆಂಡ್ ವಿರುದ್ಧದ[149] ಎರಡು ಇನಿಂಗ್ಸ್ ಹೊರತುಪಡಿಸಿದರೆ ರಾಹುಲ್ ಬ್ಯಾಟಿಂಗ್ ಸರಾಸರಿ ಕೇವಲ 15.62 ಮಾತ್ರ. 

ರಾಹುಲ್ ಕುಟುಕಿದ ರೋಹಿತ್ ಶರ್ಮಾಗೆ ಅಭಿಮಾನಿಗಳಿಂದ ಕ್ಲಾಸ್!

ರಾಹುಲ್ ನೀರಸ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ರಾಹುಲ್’ಗಿಂತ ಇಶಾಂತ್ ಶರ್ಮಾ ಬೆಸ್ಟ್ ಎಂದು ಹಲವರು ವ್ಯಂಗ್ಯವಾಡಿದ್ದಾರೆ.