"

ಕಿಂಗ್ಸ್’ಟನ್[ಸೆ.02]: ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್’ನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನ ತೋರಿದೆ. ಇದರೊಂದಿಗೆ ಎರಡನೇ ಟೆಸ್ಟ್ ಪಂದ್ಯದಲ್ಲೂ ವಿಂಡೀಸ್ ಎದುರು ಜಯಭೇರಿ ಬಾರಿಸುವತ್ತ ವಿರಾಟ್ ಪಡೆ ಮುನ್ನುಗ್ಗುತ್ತಿದೆ.

ಬುಮ್ರಾ ಚೊಚ್ಚಲ ಹ್ಯಾಟ್ರಿಕ್: ನೂರರೊಳಗೆ ಆಲೌಟ್ ಭೀತಿಯಲ್ಲಿ ವಿಂಡೀಸ್..!

87 ರನ್’ಗಳೊಂದಿಗೆ ಮೂರನೇ ದಿನ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ 117 ರನ್’ಗಳಿಗೆ ಕೊನೆಯ ಮೂರು ವಿಕೆಟ್ ಕಳೆದುಕೊಂಡಿತು. ಶಮಿ,ಇಶಾಂತ್ ಹಾಗೂ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು. 299 ರನ್’ಗಳ ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. 9 ರನ್ ಗಳಿಸುವಷ್ಟರಲ್ಲಿ ಮಯಾಂಕ್ ಅಗರ್’ವಾಲ್ ವಿಕೆಟ್ ಕಳೆದುಕೊಂಡಿತು. ಇನ್ನು ರನ್ ಗಳಿಸಲು ಪರದಾಡಿದ ಮತ್ತೋರ್ವ ಕನ್ನಡಿಗ ಕೆ.ಎಲ್ ರಾಹುಲ್ 63 ಎಸೆತಗಳನ್ನು ಎದುರಿಸಿ ಕೇವಲ 6 ರನ್’ಗಳಿಸಿ ಪೆವಿಲಿಯನ್ ಸೇರಿದರು.

"

ಈ ಇಬ್ಬರನ್ನು ಪೆವಿಲಿತಯನ್’ಗೆ ಅಟ್ಟುವಲ್ಲಿ ರೋಚ್ ಯಶಸ್ವಿಯಾದರು. ಇದರ ಬೆನ್ನಲ್ಲೇ ನಾಯಲ ಕೊಹ್ಲಿ ಶೂನ್ಯ ಸುತ್ತಿ ರೋಚ್’ಗೆ ಮೂರನೇ ಬಲಿಯಾದರು. ಪೂಜಾರ ಬ್ಯಾಟಿಂಗ್ 27 ರನ್’ಗಳಿಗೆ ಸೀಮಿತವಾಯಿತು. ಆ ಬಳಿಕ ಜತೆಯಾದ ಉಪನಾಯಕ ಅಜಿಂಕ್ಯ ರಹಾನೆ[64] ಹಾಗೂ ಹನುಮ ವಿಹಾರಿ[53] ಶತಕದ ಜತೆಯಾಟವಾಡುವ ಮೂಲಕ ತಂಡವನ್ನು 150ರ ಗಡಿ ದಾಟಿಸಿದರು. ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿದ್ದಾಗ ನಾಯಕ ವಿರಾಟ್ ಕೊಹ್ಲಿ ಡಿಕ್ಲೇರ್ ಮಾಡಿಕೊಂಡರು. ಇದರೊಂದಿಗೆ ವೆಸ್ಟ್ ಇಂಡೀಸ್’ಗೆ ಗೆಲ್ಲಲು 468 ರನ್’ಗಳ ಗುರಿ ನೀಡಿದೆ.

"

117 ರನ್‌ಗೆ ವಿಂಡೀಸ್ ಆಲೌಟ್; ಭಾರತಕ್ಕೆ 299 ರನ್ ಭರ್ಜರಿ ಮುನ್ನಡೆ

ಇನ್ನು ಕಠಿಣ ಗುರಿ ಬೆನ್ನತ್ತಿದ ವಿಂಡೀಸ್’ಗೆ ಮೂರನೇ ಓವರ್’ನಲ್ಲಿ ಇಶಾಂತ್ ಶಾಕ್ ನೀಡಿದರು. ಕ್ರೇಗ್ ಬ್ರಾಥ್’ವೇಟ್ ಕೇವಲ 3 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಜಾನ್ ಕ್ಯಾಂಬೆಲ್[16]ಗೆ ಶಮಿ ಪೆವಿಲಿಯನ್ ಹಾದಿ ತೋರಿಸಿದರು. ಇದೀಗ ಡ್ಯಾರನ್ ಬ್ರಾವೋ[18] ಹಾಗೂ ಶಮರ್ಥ್ ಬ್ರೂಕ್ಸ್[4] ರನ್ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಳ್ಳಲು 8 ವಿಕೆಟ್ ಅಗತ್ಯವಿದ್ದರೆ, ವಿಂಡೀಸ್’ಗೆ ಸರಣಿ ಸಮ ಮಾಡಿಕೊಳ್ಳಲು ಇನ್ನೂ 423 ರನ್’ಗಳ ಅವಶ್ಯಕತೆಯಿದೆ.