ಜಮೈಕಾ(ಆ.31): ಟೀಂ ಇಂಡಿಯಾದಲ್ಲಿನ ಒಳಜಗಳ ಸಾಮಾಜಿಕ ಜಾಲತಾಣ ಮೂಲಕ ಹೊರಬರುತ್ತಿದೆ. ಈ ಮೊದಲು ವಿರಾಟ್ ಕೊಹ್ಲಿ ಹಾಗೂ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರನ್ನು ಟ್ವಿಟರ್‌ನಲ್ಲಿ ಅನ್‌ಫಾಲೋ ಮಾಡಿದ ರೋಹಿತ್ ಶರ್ಮಾ ಇದೀಗ ಕೆಎಲ್ ರಾಹುಲ್ ಕಳಪೆ ಪ್ರದರ್ಶನದ ಪೋಸ್ಟ್‌ಗೆ ಲೈಕ್ ಮಾಡಿ ವಿವಾದ ಸೃಷ್ಟಿಸಿದ್ದಾರೆ. ರೋಹಿತ್ ನಡೆತೆಗೆ ಅಭಿಮಾನಿಗಳು ಗರಂ ಆಗಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ; ಮತ್ತೆ ಸ್ಫೋಟಿಸಿದ ರೋಹಿತ್!

ಕೆಎಲ್ ರಾಹುಲ್ ಟೆಸ್ಟ್ ಸರಾಸರಿ 35, ಆದರೂ ಕೆಲ ಭಾರತೀಯರಿಗೆ ರಾಹುಲ್ ಡ್ರಾನ್ ಬ್ರಾಡ್ಮನ್. ರೋಹಿತ್ ಶರ್ಮಾ 40 ಸರಾಸರಿಯಲ್ಲಿ ಬ್ಯಾಟ್ ಬೀಸಿದರೂ ತಂಡದಲ್ಲಿ ಸ್ಥಾನವಿಲ್ಲ ಎಂಬ ಪೋಸ್ಟ್‌ಗೆ ರೋಹಿತ್ ಲೈಕ್ ಮಾಡಿದ್ದರು. ಇದರ ಬೆನ್ನಲ್ಲೇ ರೋಹಿತ್ ಶರ್ಮಾರನ್ನು ಟ್ರೋಲ್ ಮಾಡಲಾಗಿದೆ.