Asianet Suvarna News Asianet Suvarna News

ಲಾರ್ಡ್ಸ್ ಟೆಸ್ಟ್: ಮೂರನೇ ದಿನದಾಟದ ಬಗ್ಗೆ ಟ್ವಿಟರಿಗರು ಏನಂದ್ರು..?

ಲಾರ್ಡ್ಸ್ ಟೆಸ್ಟ್’ನ ಮೊದಲ ದಿನದಾಟ ಮಳೆಯಿಂದಾಗಿ ನಡೆದಿರಲಿಲ್ಲ. ಎರಡನೇ ದಿನ ಭಾರತ ಕೇವಲ 107 ರನ್’ಗಳಿಗೆ ಸರ್ವಪತನ ಕಂಡಿತು. ಆಬಳಿಕ ಮೂರನೇ ದಿನದ ಮೊದಲ ಸೆಷನ್’ನಲ್ಲಿ 89 ರನ್’ಗಳಿಗೆ ಇಂಗ್ಲೆಂಡ್’ನ 4 ವಿಕೆಟ್ ಕಬಳಿಸಿ ಭಾರತ ಮೇಲುಗೈ ಸಾಧಿಸಲು ಪ್ರಯತ್ನಿಸಿತು. ಆದರೆ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಜಾನಿ ಬೈರ್’ಸ್ಟೋ[93] ಹಾಗೂ ಕ್ರಿಸ್ ವೋಕ್ಸ್ ಅಜೇಯ ಶತಕ[120]ದ ನೆರವಿನಿಂದ 250 ರನ್’ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.

Twitter reactions Woakes maiden Test century takes England to a comfortable lead of 250 at the end of day 3
Author
Lords, First Published Aug 12, 2018, 11:30 AM IST

ಲಾರ್ಡ್ಸ್[ಆ.12]: ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಲಾರ್ಡ್ಸ್’ನಲ್ಲಿ ನಡೆಯುತ್ತಿದ್ದು, ಇಂಗ್ಲೆಂಡ್ ತಂಡವು ಮೂರನೇ ದಿನದಾಟ ಮುಕ್ತಾಯದ ವೇಳೆಗೆ ಭಾರತದ ಮೇಲೆ ಬಿಗು ಹಿಡಿತ ಸಾಧಿಸಿದೆ. ಆಲ್ರೌಂಡ್ ಕ್ರಿಕೆಟಿಗ ಕ್ರಿಸ್ ವೋಕ್ಸ್ ಬಾರಿಸಿದ ಚೊಚ್ಚಲ ಶತಕದ ನೆರವಿನಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್’ನಲ್ಲಿ 250 ರನ್’ಗಳ ಭರ್ಜರಿ ಮುನ್ನಡೆ ಸಾಧಿಸಿದೆ.

ಲಾರ್ಡ್ಸ್ ಟೆಸ್ಟ್’ನ ಮೊದಲ ದಿನದಾಟ ಮಳೆಯಿಂದಾಗಿ ನಡೆದಿರಲಿಲ್ಲ. ಎರಡನೇ ದಿನ ಭಾರತ ಕೇವಲ 107 ರನ್’ಗಳಿಗೆ ಸರ್ವಪತನ ಕಂಡಿತು. ಆಬಳಿಕ ಮೂರನೇ ದಿನದ ಮೊದಲ ಸೆಷನ್’ನಲ್ಲಿ 89 ರನ್’ಗಳಿಗೆ ಇಂಗ್ಲೆಂಡ್’ನ 4 ವಿಕೆಟ್ ಕಬಳಿಸಿ ಭಾರತ ಮೇಲುಗೈ ಸಾಧಿಸಲು ಪ್ರಯತ್ನಿಸಿತು. ಆದರೆ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಜಾನಿ ಬೈರ್’ಸ್ಟೋ[93] ಹಾಗೂ ಕ್ರಿಸ್ ವೋಕ್ಸ್ ಅಜೇಯ ಶತಕ[120]ದ ನೆರವಿನಿಂದ 250 ರನ್’ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್ ತಂಡದ ಈ ಪ್ರದರ್ಶನದ ಬಗ್ಗೆ ಟ್ವಿಟರಿಗರ ಪ್ರತಿಕ್ರಿಯೆ ಹೀಗಿತ್ತು.   

Follow Us:
Download App:
  • android
  • ios