ಬೆಂಗಳೂರು[ಫೆ.08]: ಟೀಂ ಇಂಡಿಯಾ ಕೊನೆಗೂ ನ್ಯೂಜಿಲೆಂಡ್ ನೆಲದಲ್ಲಿ ಚೊಚ್ಚಲ ಟಿ20 ಗೆಲುವು ದಾಖಲಿಸಿದೆ. ಈ ಮೂಲಕ 2009ರಿಂದಲೂ ಮರೀಚಿಕೆಯಾಗಿದ್ದ ಗೆಲುವನ್ನು ನನಸಾಗಿಸಿಕೊಳ್ಳುವಲ್ಲಿ ರೋಹಿತ್ ಪಡೆ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದಂತಾಗಿದೆ.

ಕಿವೀಸ್ ನೆಲದಲ್ಲಿ ಚೊಚ್ಚಲ ಟಿ20 ಗೆಲುವಿನ ಸಿಹಿ ಕಂಡ ಭಾರತ

ಟಾಸ್ ಗೆದ್ದ ನ್ಯೂಜಿಲೆಂಡ್ ಕಾಲಿನ್ ಡಿ ಗ್ರಾಂಡ್’ಹೋಂ[50], ರಾಸ್ ಟೇಲರ್ 42 ಆಕರ್ಷಕ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತ್ತು. ಸವಾಲಿನ ಗುರಿ ಬೆನ್ನತ್ತಿದ ಭಾರತ 7 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿತು. ರೋಹಿತ್ ಶರ್ಮಾ 50, ರಿಷಭ್ ಪಂತ್ 40, ಶಿಖರ್ ಧವನ್ 30, ಧೋನಿ 20, ವಿಜಯ್ ಶಂಕರ್ 14 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಮೊದಲ ಟಿ20 ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ 80 ರನ್’ಗಳ ಹೀನಾಯ ಸೋಲು ಕಂಡಿದ್ದ ಭಾರತ, ಎರಡನೇ ಪಂದ್ಯದಲ್ಲಿ ಅಮೋಘ ಕಮ್’ಬ್ಯಾಕ್ ಮಾಡಿದೆ. ಆರಂಭಿಕರಾದ ಧವನ್-ರೋಹಿತ್ ಜೋಡಿ 79 ರನ್’ಗಳ ಜತೆಯಾಟ, ಆ ಬಳಿಕ ಮಧ್ಯಮ ಕ್ರಮಾಂಕದವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ಸುಲಭ ಜಯ ದಾಖಲಿಸಿದೆ.

ಟೆಸ್ಟ್, ಒನ್ ಡೇ ಕ್ರಿಕೆಟ್’ನಲ್ಲಿ ಸಚಿನ್ ಬಾಸ್, ಟಿ20 ರನ್ ಬೇಟೆಯಲ್ಲಿ ರೋಹಿತ್ ಕಿಂಗ್..!

ಟೀಂ ಇಂಡಿಯಾ ಪ್ರದರ್ಶನ ಕಂಡ ಟ್ವಿಟರಿಗರು ಏನಂದ್ರು ನೀವೇ ನೋಡಿ...