ಐಪಿಎಲ್‌ ಬೆಟ್ಟಿಂಗ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದಿರುವ ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ತುಷಾರ್‌ ಅರೋಠೆ ಈ ಕುರಿತಂತೆ ತುಟಿಬಿಚ್ಚಿದ್ದಾರೆ.

ವಡೋದರಾ: ಐಪಿಎಲ್‌ ಬೆಟ್ಟಿಂಗ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದಿರುವ ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ತುಷಾರ್‌ ಅರೋಠೆ, ತಾವು ಅಮಾಯಕ, ಈ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದಿದ್ದಾರೆ. 

IPL ಬೆಟ್ಟಿಂಗ್: ಟೀಂ ಇಂಡಿಯಾ ಮಹಿಳಾ ತಂಡದ ಮಾಜಿ ಕೋಚ್ ಅರೆಸ್ಟ್!

ಬುಧವಾರ ಇಲ್ಲಿ ಮಾತನಾಡಿದ ಅವರು, ‘ಕ್ರಿಕೆಟ್‌ ನನಗೆ ಅನ್ನ ನೀಡುತ್ತಿದೆ. ನಾನು ಇಂದು ಈ ಮಟ್ಟಕ್ಕೇರಲು ಕ್ರಿಕೆಟ್‌ ಕಾರಣ. ಜೀವನದಲ್ಲಿ ಒಮ್ಮೆಯೂ ಆಟಕ್ಕೆ ಮೋಸ ಮಾಡಿಲ್ಲ. ಬೆಟ್ಟಿಂಗ್‌ ನಡೆಸುವುದನ್ನು ಬಿಡಿ, ಆ ಬಗ್ಗೆ ನಾನು ಯೋಚಿಸಿಯೂ ಇಲ್ಲ’ ಎಂದಿದ್ದಾರೆ. 

ಮಂಗಳವಾರ ಸ್ಥಳೀಯ ಪೊಲೀಸರು ಅವರ ಸಹ ಮಾಲೀಕತ್ವದ ಕೆಫೆ ಮೇಲೆ ದಾಳಿ ನಡೆಸಿ 19 ಮಂದಿಯನ್ನು ಬಂಧಿಸಿದ್ದರು. ತುಷಾರ್‌ ಅರೋಠೆ ಮಾರ್ಗದರ್ಶನದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು.