ಐಪಿಎಲ್ ಬೆಟ್ಟಿಂಗ್ ಪ್ರಕರಣಗಳು ಮತ್ತೆ ಸದ್ದು ಮಾಡುತ್ತಿದೆ. ಇದೀಗ ಟೀಂ ಇಂಡಿಯಾ ಮಹಿಳಾ ತಂಡ ಮಾಜಿ ಕೋಚ್ ಬೆಟ್ಟಿಂಗ್ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಗುಜರಾತ್(ಏ.02): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಬೆಟ್ಟಿಂಗ್ ಪ್ರಕರಣ ಭುಗಿಲೆದ್ದಿದೆ. 2013ರಲ್ಲಿ ಬೆಟ್ಟಿಂಗ್ ಆರೋಪದಿಂದ CSK ಮೇಲ್ವಿಚಾರಕ ಗುರುನಾಥ್ ಮೇಯಪ್ಪನ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಶಿಕ್ಷೆ ಎದುರಿಸಿದ್ದರು. ಇದೀಗ ಟೀಂ ಇಂಡಿಯಾ ಮಹಿಳಾ ತಂಡದ ಮಾಜಿ ಕೋಚ್ ಐಪಿಎಲ್ ಬೆಟ್ಟಿಂಗ್ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: ಧೋನಿ CSK ಪರ ಅಬ್ಬರಿಸುವುದರ ಹಿಂದಿನ ಗುಟ್ಟೇನು..?
ವಡೋದರ ಕ್ರೈಂ ಬ್ರಾಂಚ್ ಪೊಲೀಸರು ಐಪಿಎಲ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಭಾರತ ಮಹಿಳಾ ತಂಡ ಮಾಜಿ ಕೋಚ್ ತುಷಾರ್ ಅರೋಟೆ ಸೇರಿದಂತೆ 19 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಬೆಟ್ಟಿಂಗ್ ದಂಧೆಕೋರರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: IPL ಆಡುತ್ತಿರುವ ಪಾಂಡ್ಯ, ರಾಹುಲ್’ಗೆ ಸಂಕಷ್ಟ..!
ಭಾರತ ಮಹಿಳಾ ತಂಡ ಹಾಗೂ ನಾಯಕಿ ಮಿಥಾಲಿ ರಾಜ್ ಜೊತೆ ಗುದ್ದಾಟ ನಡೆಸಿದ ತುಷಾರ್ ಆರೋಟೆಯನ್ನು ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ತುಷಾರ್ ಅರೋಟೆ ಮಾರ್ಗದರ್ಶನದಲ್ಲಿ ಭಾರತ ಮಹಿಳಾ ತಂಡ 2017ರ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಇದೀಗ ಬೆಟ್ಟಿಂಗ್ ಆರೋಪದಡಿ ಬಂಧನಕ್ಕೊಳಗಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
