ಮಹಿಳಾ ಐಪಿಎಲ್: ಗೌರವಾನ್ವಿತ ಮೊತ್ತ ಕಲೆಹಾಕಿದ ಟ್ರೈಯಲ್ ಬ್ಲೇಜರ್ಸ್

First Published 22, May 2018, 3:50 PM IST
Trailblazers Post 129 for 6 vs Supernovas
Highlights

ಚೊಚ್ಚಲ ಮಹಿಳಾ ಐಪಿಎಲ್ ಪಂದ್ಯವಳಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ ನೇತೃತ್ವದ ಟ್ರೈಯಲ್ ಬ್ಲೇಜರ್ಸ್ 6 ವಿಕೆಟ್ ಕಳೆದುಕೊಂಡು 129 ರನ್’ಗಳ ಗೌರವಾನ್ವಿತ ಮೊತ್ತ ಕಲೆಹಾಕಿದೆ.

ಮುಂಬೈ[ಮೇ.22]: ಚೊಚ್ಚಲ ಮಹಿಳಾ ಐಪಿಎಲ್ ಪಂದ್ಯವಳಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ ನೇತೃತ್ವದ ಟ್ರೈಯಲ್ ಬ್ಲೇಜರ್ಸ್ 6 ವಿಕೆಟ್ ಕಳೆದುಕೊಂಡು 129 ರನ್’ಗಳ ಗೌರವಾನ್ವಿತ ಮೊತ್ತ ಕಲೆಹಾಕಿದೆ.
ಟಾಸ್ ಸೋತರೂ ಮೊದಲು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟ್ರೈಯಲ್ ಬ್ಲೇಜರ್ಸ್ ಸ್ಫೋಟಕ ಆರಂಭ ಪಡೆಯಿತಾದರೂ ಆರಂಭದಲ್ಲೇ ಮುಗ್ಗರಿಸಿತು. ಎರಡನೇ ಓವರ್’ನ ಕೊನೆಯ ಎಸೆತದಲ್ಲಿ ಅಲಿಸಾ ಹೀಲಿ ವಿಕೆಟ್ ಕಳೆದುಕೊಂಡರೆ, ಮರು ಓವರ್’ನಲ್ಲೇ ನಾಯಕಿ ಸ್ಮೃತಿ ಮಂದಾನ ಎಲಿಸಾ ಪೆರಿ ಬೌಲಿಂಗ್’ನಲ್ಲಿ ಹರ್ಮನ್’ಪ್ರೀತ್ ಕೌರ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. 4ನೇ ಓವರ್’ನಲ್ಲಿ ಬೇತ್ ಮೂನಿ ದೊಡ್ಡ ಹೊಡೆತಕ್ಕೆ ಕೈಹಾಕಿ ಮೆಗಾನ್ ಶ್ಯೂಟ್ ಎಸೆತದಲ್ಲಿ ವೇದಾ ಕೃಷ್ಣಮೂರ್ತಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಆ ಬಳಿಕ ನಾಲ್ಕನೆ ವಿಕೆಟ್’ಗೆ ದೀಪ್ತಿ ಶರ್ಮಾ ಹಾಗೂ ಸೂಜಿ ಬೇಟ್ಸ್ ಉಪಯುಕ್ತ ಜತೆಯಾಟದ ಮೂಲಕ ತಂಡವನ್ನು 50ರ ಗಡಿ ದಾಟಿಸಿದರು. ಸೂಜಿ ಬೇಟ್ಸ್[32] ರನ್ ಬಾರಿಸಿ ಬೌಲ್ಡ್ ಆದರೆ, ದೀಪ್ತಿ 21 ರನ್ ಬಾರಿಸಿದರು. ಕೊನೆಯಲ್ಲಿ ಜೆಮಿಮಾ ರೋಡ್ರಿಸ್[25] ಹಾಗೂ ಶಿಖಾ ಪಾಂಡೆ[14] ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ಸಾಧ್ಯವಾಯಿತು.   
ಇನ್ನು ಸೂಪರ್’ನೋವಾಸ್ ಪರ ಎಲಿಸಾ ಪೆರ್ರಿ ಹಾಗೂ ಮೆಗನ್ ಶ್ಯುಟ್ ತಲಾ 2 ವಿಕೆಟ್ ಪಡೆದರೆ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಹಾಗೂ ಅನುಜಾ ಪಾಟೀಲ್ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಟ್ರೈಯಲ್ ಬ್ಲೇಜರ್ಸ್: 129
ಸೂಜಿ ಬೇಟ್ಸ್ : 32
ಮೆಗನ್ ಶ್ಯುಟ್ : 18/2
[* ವಿವರ ಅಪೂರ್ಣ]

loader