ಬೆಂಗಳೂರು(ಫೆ.06): ಚುಟುಕು ಕ್ರಿಕೆಟ್‌ನಲ್ಲಿ ಅಬ್ಬರಿಸುವುದು ಅಷ್ಟು ಸುಲಭವಲ್ಲ. ಕ್ರೀಸ್‌ನಲ್ಲಿ ಸೆಟ್ಲೋ ಆಗೋ ಮುನ್ನವೇ ವಿಕೆಟ್ ಕೈಚೆಲ್ಲಿರುತ್ತಾರೆ. ಅದರಲ್ಲೂ ಐಪಿಎಲ್ ಟೂರ್ನಿಯಲ್ಲಿ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಬೇಕು. ಆದರೆ ಎಲ್ಲಾ ಪಂದ್ಯಗಳಲ್ಲಿ ಇದು ಕಷ್ಟ. ಕೆಲ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿರುವ ಟಾಪ್-5 ಕ್ರಿಕೆಟಿಗರ ಲಿಸ್ಟ್‌ನಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯಾಗಲಿ, ಕಿಂಗ್ಸ್ ಇಲೆವೆನ್ ಪಂಜಾಬ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಆಗಲಿ ಇಲ್ಲ. ಇಲ್ಲಿದೆ ಐವರು ಗರಿಷ್ಠ ಸ್ಟ್ರೈಕ್ ರೇಟ್ ಹೊಂದಿದ ಐಪಿಎಲ್ ಬ್ಯಾಟ್ಸ್‌ಮನ್ ವಿವರ.

ಇದನ್ನೂ ಓದಿ: ಐಪಿಎಲ್ 2019: ಪ್ರಶಸ್ತಿ ಗೆಲ್ಲಲು ಮುಂಬೈ ಇಂಡಿಯನ್ಸ್‌ಗಿದೆ 5 ಕಾರಣ!

1 ಆ್ಯಂಡ್ರೆ ರಸೆಲ್
ವೆಸ್ಟ್ ಇಂಡೀಸ್ ಅಲ್ರೌಂಡರ್ ಆ್ಯಂಡ್ರೆ ರಸೆಲ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೀ ಪ್ಲೇಯರ್. ಬೌಲಿಂಗ್‌ನಲ್ಲಿ ಹಾಗೂ ಬ್ಯಾಟಿಂಗ್‌ನಲ್ಲಿ ರಸೆಲ್ ಏಕಾಂಗಿಯಾಗಿ ಪಂದ್ಯವನ್ನ ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ರಸೆಲ್ ಆಡಿದ ಒಟ್ಟು 50 ಐಪಿಎಲ್ ಪಂದ್ಯಗಳಿಂದ 44 ವಿಕೆಟ್ ಕಬಳಿಸಿದದರೆ, ಬ್ಯಾಟಿಂಗ್‌ನಲ್ಲಿ 890 ರನ್ ಸಿಡಿಸಿದ್ದಾರೆ. ರಸೆಲ್ ಸ್ಟ್ರೈಕ್ ರೈಟ್ 177.29.

2 ಸುನಿಲ್ ನರೈನ್
ಕೆಕೆಆರ್ ತಂಡದ ಪ್ರಮುಖ ಸ್ಪಿನ್ನರ್ ಕಳೆದರಡು ಐಪಿಎಲ್ ಆವೃತ್ತಿಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬಡ್ತಿ ಪಡೆದಿದ್ದಾರೆ. ಓಪನರ್ ಆಗಿ ಕಣಕ್ಕಿಳಿದು ಹಿಗ್ಗಾ ಮುಗ್ಗಾ ಅಬ್ಬರಿಸುವ ನರೈನ್ ಸ್ಟ್ರೈಕ್‌ರೇಟ್‌ನಲ್ಲಿ 2ನೇ ಸ್ಥಾನದಲ್ಲಿದ್ದಾರೆ. 98 ಐಪಿಎಲ್ ಪಂದ್ಯಗಳಿಂದ ನರೈನ್ 112 ವಿಕೆಟ್ ಉರುಳಿಸಿದ್ದಾರೆ. 628 ರನ್ ಸಿಡಿಸಿದ್ದಾರೆ. ನರೈನ್ ಸ್ಟ್ರೈಕ್‌ರೇಟ್ 168.81.

ಇದನ್ನೂ ಓದಿ: ಎರಡೇ ದಿನದಲ್ಲಿ ವಿರುಷ್ಕಾ ಫೋಟೋಗೆ 35 ಲಕ್ಷ ಲೈಕ್!

3 ಕ್ರಿಸ್ ಮೊರಿಸ್
ಸೌತ್ಆಫ್ರಿಕಾ ಆಲ್ರೌಂಡರ್ ಕ್ರಿಸ್ ಮೊರಿಸ್ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಹಾಗೂ  ಸದ್ಯ ಡೆಲ್ಲಿ ಕ್ಯಾಪಿಟಲ್ಸ್(ಡೆಲ್ಲಿ ಡೇರ್‌ಡೆವಿಲ್ಸ್) ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟು 52 ಐಪಿಎಲ್ ಪಂದ್ಯಗಳಿಂದ 56 ವಿಕೆಟ್ ಉರುಳಿಸಿರುವ ಮೊರಿಸ್, 485 ರನ್ ಸಿಡಿಸಿದ್ದಾರೆ. ಮೊರಿಸ್ ಸ್ಟೈಕ್‌ರೇಟ್ 166.66.

4 ರಿಷಬ್ ಪಂತ್
ಟೀಂ ಇಂಡಿಯಾದಲ್ಲಿ ಮಿಂಚಿನ ಪ್ರದರ್ಶನ ನೀಡಿ ಗಮನಸೆಳೆದಿರುವ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್, ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಪರ ಅಬ್ಬರಿಸಿದ ಪಂತ್, ಟೀಂ ಇಂಡಿಯಾಗೂ ಆಯ್ಕೆಯಾದರು. ಐಪಿಎಲ್ ಟೂರ್ನಿಯಲ್ಲಿ ಒಟ್ಟು 38 ಪಂದ್ಯ ಆಡಿರುವ ಪಂತ್, 162.71 ಸ್ಟ್ರೈಕ್‌ರೇಟ್ ಹೊಂದಿದ್ದಾರೆ.

ಇದನ್ನೂ ಓದಿ: ಐಪಿಎಲ್ ತಂಡದ ಆಟಗಾರರ ಒಟ್ಟು ವೇತನ-ಯಾವ ತಂಡಕ್ಕೆ ಮೊದಲ ಸ್ಥಾನ?

5 ಗ್ಲೆನ್ ಮ್ಯಾಕ್ಸ್‌ವೆಲ್
ಟಿ20 ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್, ಐಪಿಎಲ್ ಟೂರ್ನಿಯಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. 2014ರ ಆವೃತ್ತಿಯಲ್ಲಿ 552 ರನ್ ಚಚ್ಚಿದ ಮ್ಯಾಕ್ಸ್‌ವೆಲ್ ಒಟ್ಟು 69 ಪಂದ್ಯಗಳಿಂದ 1297 ರನ್ ಸಿಡಿಸಿದ್ದಾರೆ. ಮ್ಯಾಕ್ಸ್‌ವೆಲ್ ಸ್ಟ್ರೈಕ್ ರೇಟ್ 161.13.