ಉಚಿತ ಪಾಸ್ ಹಂಚಿಕೆ ವಿಚಾರದಲ್ಲಿ ಒಂದೊಮ್ಮೆ ಬಿಸಿಸಿಐ ತನ್ನ ನಿಲುವನ್ನು ಬದಲಿಸದಿದ್ದರೆ, ನ.11ರಂದು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಭಾರತ-ವಿಂಡೀಸ್ ನಡುವಿನ ಟಿ20 ಪಂದ್ಯಕ್ಕೆ ಆತಿಥ್ಯ ವಹಿಸುವುದಿಲ್ಲ ಎಂದಿದೆ. ಈ ಸಂಬಂಧ ಬಿಸಿಸಿಐ ಹಾಗೂ ಸುಪ್ರೀಂಕೋರ್ಟ್ ನೇಮಿತ ಬಿಸಿಸಿಐನ ಆಡಳಿತ ಸಮಿತಿ(ಸಿಒಎ)ಗೆ ಶುಕ್ರವಾರ ಪತ್ರ ಬರೆಯುವುದಾಗಿ ಹೇಳಿದೆ.

ಚೆನ್ನೈ[ಅ.06]: ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳ ನಡುವಿನ ಉಚಿತ ಪಾಸ್ ಹಂಚಿಕೆ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಧ್ಯ ಪ್ರದೇಶ ಕ್ರಿಕೆಟ್ ಸಂಸ್ಥೆ ಬಳಿಕ ಇದೀಗ ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್'ಸಿಎ) ತಕಾರರು ತೆಗೆದಿದೆ. 

ಇದನ್ನು ಓದಿಪಾಸ್‌ ವಿವಾದ: ಬಿಸಿಸಿಐ ನಡೆಗೆ ಗಂಗೂಲಿ ಬೇಸರ

ಉಚಿತ ಪಾಸ್ ಹಂಚಿಕೆ ವಿಚಾರದಲ್ಲಿ ಒಂದೊಮ್ಮೆ ಬಿಸಿಸಿಐ ತನ್ನ ನಿಲುವನ್ನು ಬದಲಿಸದಿದ್ದರೆ, ನ.11ರಂದು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಭಾರತ-ವಿಂಡೀಸ್ ನಡುವಿನ ಟಿ20 ಪಂದ್ಯಕ್ಕೆ ಆತಿಥ್ಯ ವಹಿಸುವುದಿಲ್ಲ ಎಂದಿದೆ. ಈ ಸಂಬಂಧ ಬಿಸಿಸಿಐ ಹಾಗೂ ಸುಪ್ರೀಂಕೋರ್ಟ್ ನೇಮಿತ ಬಿಸಿಸಿಐನ ಆಡಳಿತ ಸಮಿತಿ(ಸಿಒಎ)ಗೆ ಶುಕ್ರವಾರ ಪತ್ರ ಬರೆಯುವುದಾಗಿ ಹೇಳಿದೆ.

ಇದನ್ನು ಓದಿ:ಇಂಡಿಯಾ-ವೆಸ್ಟ್ಇಂಡೀಸ್ 2ನೇ ODI ಮೈದಾನ ಬದಲು

ಬಿಸಿಸಿಐನ ನೂತನ ಸಂವಿಧಾನದ ಪ್ರಕಾರ ಕ್ರೀಡಾಂಗಣದ ಆಸನಗಳ ಸಾಮರ್ಥ್ಯದ ಶೇ.90ರಷ್ಟು ಆಸನಗಳ ಟಿಕೆಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬೇಕು. ಇನ್ನುಳಿದ ಶೇ.10ರಷ್ಟು ಟಿಕೆಟ್'ನಲ್ಲಿ 5ರಷ್ಟನ್ನು ಬಿಸಿಸಿಐಗೆ ನೀಡಬೇಕಿದೆ. ಮಧ್ಯಪ್ರದೇಶ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅ.24ರಂದು ಇಂದೋರ್‌ನಲ್ಲಿ ನಡೆಯಬೇಕಿದ್ದ ಭಾರತ- ವಿಂಡೀಸ್ ನಡುವಿನ ಪಂದ್ಯ ವಿಶಾಖಪಟ್ಟಣಕ್ಕೆ ಸ್ಥಳಾಂತರಗೊಂಡಿತ್ತು.